ಹಾಸನಾಂಬೆಯ ದರ್ಶನಕ್ಕೆ ಹೆಲಿಕಾಪ್ಟರ್​ನಲ್ಲಿ ಹಾಸನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆಯ ದರ್ಶನಕ್ಕೆ ಹೆಲಿಕಾಪ್ಟರ್​ನಲ್ಲಿ ಹಾಸನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 28, 2024 | 6:38 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಹಕಾರ ಹಾಗೂ ಹಾಸನ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಆಗಮಿಸಿದರು. ಹಾಸನ ಜಿಲ್ಲಾಧಿಕಾರಿ ಮತ್ತು ಇತರ ಕೆಲ ಆಧಿಕಾರಿಗಳು ಮುಖ್ಯಮಂತ್ರಿ ಮತ್ತು ಗಣ್ಯರನ್ನು ಬರಮಾಡಿಕೊಂಡರು. ಸಿಎಂ ಕಾಣದೆ ಹೋದಾಗ ಅವರಿಗಾಗಿ ತಂದಿದ್ದ ಹಾರವನ್ನು ಕಾರ್ಯಕರ್ತನೊಬ್ಬ ರಾಜಣ್ಣಗೆ ಹಾಕಿದ!

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಾಂಬೆಯ ದರ್ಶನ ಪಡೆಯಲು ಇಂದು ಬೆಂಗಳೂರುನಿಂದ ಹಾಸನಕ್ಕೆ
ಹೆಲಿಕಾಪ್ಟರೊಂದರಲ್ಲಿ ಅಗಮಿಸಿದರು. ಸಿಎಂ ಮತ್ತು ಇತರ ಗಣ್ಯರನ್ನು ಹೊತ್ತ ಹೆಲಿಕಾಪ್ಟರ್ ಹಾಸನ ನಗರದ ಹೊರವಲಯದಲ್ಲಿರುವ ಭೂವನಹಳ್ಳಿ ಹೆಲಿಪ್ಯಾಡ್​ನಲ್ಲಿ ಬಂದಿಳಿಯುವ ದೃಶ್ಯವನ್ನು ಇಲ್ಲಿ ನೋಡಬಹುದು. ಸಿದ್ದರಾಮಯ್ಯರನ್ನು ನೋಡಲು ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಕಾತರ. ಹಾಗಾಗೇ ಚಾಪರ್ ಲ್ಯಾಂಡ್ ಆದ ಕೂಡಲೇ ಅವರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್​ಗಳನ್ನು ತಳ್ಳಿ ಹೆಲಿಪ್ಯಾಡ್​ನತ್ತ ನುಗ್ಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಸಿದ್ದರಾಮಯ್ಯ ಪರಮಾಪ್ತನ ಮನೆ ಮೇಲೂ ಇಡಿ ದಾಳಿ, ಮುಂದಿನ ಟಾರ್ಗೆಟ್ ಯಾರು?