ರಾಜಾ ವೆಂಕಟಪ್ಪ ನಾಯಕ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಚಾಪರ್ ನಲ್ಲಿ ಸುರಪುರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

|

Updated on: Feb 26, 2024 | 4:27 PM

ನಿನ್ನೆ ಹೃದಯಾತದಿಂದ ನಿಧನ ಹೊಂದಿದ ಸುರಪುರದ ಕಾಂಗ್ರೆಸ್ ಶಾಸಕ ಮತ್ತು ಮೊನ್ನೆಯಷ್ಟೇ ಉಗ್ರಾಣ ನಿಗಮ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದ ರಾಜಾ ವೆಂಕಅಪ್ಪ ನಾಯಕ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಯವರು ಹೆಲಿಕಾಪ್ಟರ್ ನಲ್ಲಿ ಜಿಲ್ಲಾಕೇಂದ್ರ ಯಾದಗಿರಿಯಿಂದ ಸುಮಾರು 40 ಕಿಮೀ ದೂರ ಇರುವ ಸುರಪುರಕ್ಕೆ ಆಗಮಿಸಿದರು.

ಯಾದಗಿರಿ: ಬೆಳಗ್ಗೆ ವಿಧಾನ ಸಭಾ ಅಧಿವೇಶನದ ಕಾರ್ಯಕಲಾಪಗಳಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಧ್ಯಾಹ್ನದ ಹೊತ್ತಿಗೆ ಬಿಸಿಲುನಾಡು ಯಾದಗಿರಿಗೆ (Yadgir) ಅಗಮಿಸಿದರು. ನಿನ್ನೆ ಹೃದಯಾತದಿಂದ ನಿಧನ ಹೊಂದಿದ ಸುರಪುರದ ಕಾಂಗ್ರೆಸ್ ಶಾಸಕ ಮತ್ತು ಮೊನ್ನೆಯಷ್ಟೇ ಉಗ್ರಾಣ ನಿಗಮ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದ ರಾಜಾ ವೆಂಕಅಪ್ಪ ನಾಯಕ್ (Raja Venkatappa Nayak) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಯವರು ಹೆಲಿಕಾಪ್ಟರ್ ನಲ್ಲಿ ಜಿಲ್ಲಾಕೇಂದ್ರ ಯಾದಗಿರಿಯಿಂದ ಸುಮಾರು 40 ಕಿಮೀ ದೂರ ಇರುವ ಸುರಪುರಕ್ಕೆ ಆಗಮಿಸಿದರು. ವೆಂಕಟಪ್ಪ ನಾಯಕ್ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನಗಳಲ್ಲಿ ಭಾಗಿಯಾದ ಬಳಿಕ ಸಿದ್ದರಾಮಯ್ಯ ಬೆಂಗಳೂರು ವಾಪಸ್ಸು ಹೋಗಲಿದ್ದಾರೆ. ಅವರ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ ಮತ್ತು ಶಾಸಕ ಬಸನಗೌಡ ದದ್ದಲ್ ಸಹ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ಸದನದಲ್ಲಿ ಅಗಲಿದ ನಾಯಕನ ಬಗ್ಗೆ ಮಾತಾಡಿದ ಮುಖ್ಯಮಂತ್ರಿಯವರು, ತನಗೆ ಪರಮಾಪ್ತರಾಗಿದ್ದ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು ಎಂದು ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ