ಭೈರತಿ ಸುರೇಶ್ ಮಗನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತಡವಾಗಿ ಅಗಮಿಸಿದ ಸಿಎಂ ಸಿದ್ದರಾಮಯ್ಯ
ಯಲಹಂಕ ಶಾಸಕ ವಿಶ್ವನಾಥ್ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ಕನ್ನಡಿಗರಲ್ಲಿ ಸಂತಸ ಉಂಟು ಮಾಡಿರುತ್ತದೆ. ರಾಜಕೀಯವೇ ಬೇರೆ ವೈಯಕ್ತಿಕ ಬದುಕು ಮತ್ತು ಅದರ ಉದ್ದೇಶಗಳೇ ಬೇರೆ. ಎರಡೂ ಕುಟುಂಬಗಳಿಗೆ ಅಭಿನಂದನೆ ಮತ್ತು ಶುಭಾಶಯಗಳು.
ಬೆಂಗಳೂರು: ಸಚಿವ ಭೈರತಿ ಸುರೇಶ್ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅವರ ರಾಜಕೀಯ ಗುರು ಸಿದ್ದರಾಮಯ್ಯನವರೇ ಇಲ್ವಲ್ಲ ಅಂತ ನಾವು ಬೆಳಗ್ಗೆ ಅಚ್ಚರಿಪಟ್ಟಿದ್ದು ನಿಜ. ಅದರೆ ಮುಖ್ಯಮಂತ್ರಿಯವರು ತಡವಾಗಿ ಅಗಮಿಸಿ ಮದುವೆಯ ಪೂರ್ವಭಾವಿ ಸಂಸ್ಕಾರದಲ್ಲಿ ಜೊತೆಗೂಡಿದ ಸುರೇಶ್ ಅವರ ಮಗ ಸಂಜಯ್ ಮತ್ತು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರನ್ನು ಆಶೀರ್ವದಿಸಿದರು. ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮಧ್ಯಾಹ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಂದಾಗ ಸಿದ್ದರಾಮಯ್ಯ ಇರಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭೈರತಿ ಸುರೇಶ್ ಆರೋಪ ಮಾಡಿದರೆ ಸಾಲದು ದಾಖಲೆ ತೋರಿಸಲಿ: ಬಸನಗೌಡ ಯತ್ನಾಳ್, ಶಾಸಕ