ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಪರ್​ನಲ್ಲಿ ಹಾಸನಕ್ಕೆ ಬಂದ ಸಿದ್ದರಾಮಯ್ಯ ಎಡಭಾಗದಲ್ಲಿ ಇಳಿದರೆ ಕೆಮೆರಾಮನ್ ಬಲಭಾಗದಲ್ಲಿ ಕಾಯುತ್ತಿದ್ದರು!

|

Updated on: Jun 27, 2023 | 2:43 PM

ಹೆಲಿಕಾಪ್ಟರ್ ಬಲಭಾಗದಿಂದ ಸಿದ್ದರಾಮಯ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಇಳಿದು ಕಾರಿನ ಕಡೆ ನಡೆದು ಬಂದರು.

ಹಾಸನ: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು (Kempegowda Jayanti) ರಾಜ್ಯದೆಲ್ಲೆಡೆ ಸಂಭ್ರಮ ಸಡಗರಗಳಿಂದ ಆಚರಿಸಲಾಗುತ್ತಿದೆ. ಬೆಂಗಳೂರು ನಗರವನ್ನು (Bengaluru city) ಕಟ್ಟಿದ ಧರ್ಮವೀರನ ಜಯಂತಿ ಪ್ರಯುಕ್ತ ಹಾಸನದಲ್ಲಿ (Hassan) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಿಳಿ ಮತ್ತು ನೀಲಿ ಬಣ್ಣದ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ನಗರದ ಹೊರಭಾಗದಲ್ಲಿರುವ ಬೂವನಹಳ್ಳಿಯಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಚಾಪರ್ ನ ಎಡಭಾಗದಿಂದ ಮುಖ್ಯಮಂತ್ರಿ ಇಳಿಯುತ್ತಾರೆಂದು ಭಾವಿಸಿ ಮಾಧ್ಯಮದ ಕೆಮೆರಾಮನ್ ಅದೇ ಭಾಗದಲ್ಲಿ ಕಾದು ನಿಂತಿದ್ದರು. ಆದರೆ ಆ ಕಡೆಯಿಂದ ಇಳಿದಿದ್ದು ಮಾಜಿ ಸಚಿವ ಹೆಚ್ ಎಂ ರೇವಣ್ಣ. ಬಲಭಾಗದಿಂದ ಸಿದ್ದರಾಮಯ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಇಳಿದು ಕಾರಿನ ಕಡೆ ನಡೆದು ಬಂದರು. ಮತ್ತೊಬ್ಬ ಸಚಿವ ಶಿವರಾಜ್ ತಂಗಡಗಿ ಸಹ ಹೆಲಿಪ್ಯಾಡ್ ಬಳಿ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 27, 2023 02:43 PM