ನಾಡಪ್ರಭು ಕೆಂಪೇಗೌಡ ಜಯಂತಿಗೆ ಹಾಕಿರುವ ಫ್ಲೆಕ್ಸ್ನಲ್ಲಿ ಎಡವಟ್ಟು; ಕೆಂಪೇಗೌಡರ ಬದಲಿಗೆ ಮದಕರಿ ನಾಯಕ ಚಿತ್ರ
ಫ್ಲೆಕ್ಸ್ನಲ್ಲಿ ಕೆಂಪೇಗೌಡ ಚಿತ್ರಕ್ಕೆ ಬದಲಾಗಿ ಮದಕರಿ ನಾಯಕ ಚಿತ್ರ ಬಳಕೆ ಮಾಡಲಾಗಿದೆ. ತಪ್ಪು ಅರಿವಾಗುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಫ್ಲೆಕ್ಸ್ ಇಲ್ಲದೆ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನೆರವೇರಿದೆ.
ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಗೆ(Kempegowda Jayanti) ಹಾಕಿರುವ ಫ್ಲೆಕ್ಸ್ನಲ್ಲಿ ಎಡವಟ್ಟಾಗಿದೆ. ಫ್ಲೆಕ್ಸ್ನಲ್ಲಿ ಕೆಂಪೇಗೌಡ ಚಿತ್ರಕ್ಕೆ ಬದಲಾಗಿ ಮದಕರಿ ನಾಯಕ ಚಿತ್ರ ಬಳಕೆ ಮಾಡಲಾಗಿದೆ. ತಪ್ಪು ಅರಿವಾಗುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಫ್ಲೆಕ್ಸ್ ಇಲ್ಲದೆ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನೆರವೇರಿದೆ. ಹಾಗೂ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಹೆಚ್.ಡಿ.ಕೋಟೆ ಮಿನಿ ವಿಧಾನಸೌಧದ ಕಾರ್ಯಕ್ರಮದಲ್ಲಿ ಕೆಲ ಕ್ಷಣ ಗೊಂದಲ ಉಂಟಾಗಿತ್ತು. ಬೆಳಗಿನ 10 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ 11.30ಕ್ಕೆ ಆರಂಭವಾಗಿದೆ. ಶಾಸಕರಿಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ 10 ಗಂಟೆ ಕಾರ್ಯಕ್ರಮಕ್ಕೆ 12.20ಕ್ಕೆ ಶಾಸಕ ಅನಿಲ್ ಚಿಕ್ಕಮಾದು ಆಗಮಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಜಿಎಸ್ಟಿ ಕಚೇರಿ ಕಟ್ಟಡದಿಂದ ಜಿಗಿದು ಆಫೀಸ್ ಬಾಯ್ ಆತ್ಮಹತ್ಯೆ
ಮೈಸೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಮೆರವಣಿಗೆ ಮೈಸೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆ ನಗರ ಕೋಟೆ ಆಂಜನೇಯ ದೇವಸ್ಥಾನದ ಬಳಿ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಪ್ರತಿಮೆ ಮೆರವಣಿಗೆಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ. ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಡೊಳ್ಳು, ಟಮಟೆ, ವೀರಗಾಸೆ, ಹುಲಿವೇಷ ಸೇರಿ ಹಲವು ಸಾಂಸ್ಕೃತಿಕ ಕಲಾತಂಡಗಳು ಭಾಗಿಯಾಗಿವೆ. ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಲಿದೆ.
Published On - 4:11 pm, Mon, 27 June 22