AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಜಿಎಸ್​​ಟಿ ಕಚೇರಿ ಕಟ್ಟಡದಿಂದ ಜಿಗಿದು ಆಫೀಸ್​ ಬಾಯ್ ಆತ್ಮಹತ್ಯೆ

ಜಿಎಸ್​ಟಿ ಕಚೇರಿ ಕಟ್ಟಡದಿಂದ ಜಿಗಿದು ಕಚೇರಿ ಸಹಾಯಕ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಜಿಎಸ್​ಟಿ ಕಚೇರಿಯಲ್ಲಿ ನಡೆದಿದೆ.

ಬೆಂಗಳೂರು: ಜಿಎಸ್​​ಟಿ ಕಚೇರಿ ಕಟ್ಟಡದಿಂದ ಜಿಗಿದು ಆಫೀಸ್​ ಬಾಯ್ ಆತ್ಮಹತ್ಯೆ
ಆಫೀಸ್​ ಬಾಯ್ ಲಕ್ಷ್ಮಣ(26) ಆತ್ಮಹತ್ಯೆ
TV9 Web
| Edited By: |

Updated on: Jun 27, 2022 | 3:58 PM

Share

ಬೆಂಗಳೂರು: ಜಿಎಸ್​ಟಿ ಕಚೇರಿ ಕಟ್ಟಡದಿಂದ ಜಿಗಿದು ಕಚೇರಿ ಸಹಾಯಕ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತ ಘಟನೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಜಿಎಸ್​ಟಿ ಕಚೇರಿಯಲ್ಲಿ ನಡೆದಿದೆ. ಕಟ್ಟಡದಿಂದ ಜಿಗಿದು ಆಫೀಸ್​ ಬಾಯ್ ಲಕ್ಷ್ಮಣ(26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಕಮರ್ಷಿಯಲ್​ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತಂದೆಯಿಂದಲೇ 5 ವರ್ಷದ ಮಗಳ ಹತ್ಯೆಗೆ ಯತ್ನ

ಬೆಂಗಳೂರು: ತಂದೆಯಿಂದಲೇ 5 ವರ್ಷದ ಮಗಳ ಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದಲ್ಲಿ ನಡೆದಿದ್ದು, ಆಂಧ್ರ ಮೂಲದ ಬಿಲ್ಡರ್​ ವೆಂಕಟೇಶ್ವರ್ ರಾವ್​ನನ್ನ ಹೆಚ್​ಎಎಲ್​ ಪೊಲೀಸರು ಬಂಧಿಸಿದ್ದಾರೆ. ಬರೀ ಹೆಣ್ಣು ಮಕ್ಕಳೇ ಆಗುತ್ತಿವೆ ಎಂದು 5 ವರ್ಷದ ಮಗಳ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ. 2016ರಲ್ಲಿ ರಾಧಿಕಾ ಜತೆ ವೆಂಕಟೇಶ್ವರ್ ರಾವ್ ವಿವಾಹ ಆಗಿದ್ದು, 2017 ರಲ್ಲಿ ಹೆಣ್ಣು ಮಗು ಆಗಿತ್ತು. ಎರಡನೇ ಮಗು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವೆಂಕಟೇಶ್ವರ ರಾವ್ ಕುಟುಂಬ, ಎರಡನೇ ಮಗುವು ಕೂಡ ಹೆಣ್ಣು ಮಗುವಾಗಿತ್ತು. ಬೇಸರಗೊಂಡ ಮಗುವಿನ ತಂದೆ ವೆಂಕಟೇಶ್ವರ ರಾವ್​​ನಿಂದ ಮೊದಲ ಮಗುವಿನ ಕೊಲೆಗೆ ಯತ್ನಿಸಲಾಗಿದೆ. ಈ ಬಗ್ಗೆ ಹೆಚ್​ಎಎಲ್​ ಪೊಲೀಸರಿಗೆ ದೂರು ನೀಡಿದ್ದ ಪತ್ನಿ ರಾಧಿಕಾ, ಪ್ರಕರಣ ಸಂಬಂಧ ವೆಂಕಟೇಶ್ವರ ರಾವ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಆಕಸ್ಮಿಕವಾಗಿ ನಾಲೆಗೆ ಬಿದ್ದ ಎತ್ತಿನಗಾಡಿ ರೈತ ಸಾವು:

ಮೈಸೂರು: ಆಕಸ್ಮಿಕವಾಗಿ ಎತ್ತಿನಗಾಡಿ ನಾಲೆಗೆ ಬಿದ್ದ ಪರಿಣಾಮ ರೈತ ಸಾವನ್ನಪ್ಪಿರುವಂತಹ ಘಟನೆ ಕೆ.ಆರ್.ನಗರ ತಾಲ್ಲೂಕು ಶ್ರೀರಾಮಪುರ ಗ್ರಾಮದಲ್ಲಿ ನಡೆದಿದೆ. ಕೆಸ್ತೂರು ಕೊಪ್ಪಲು ಗ್ರಾಮದ ಚಂದ್ರೇಗೌಡ (53) ಮೃತ ವ್ಯಕ್ತಿ. ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ರಾಮಸಮುದ್ರ ಬಲದಂಡೆ 2ನೇ ಬ್ರಾಂಚ್​ಗೆ ಎತ್ತಿನಗಾಡಿ ಮಗುಚಿದೆ. ಚುಂಚನಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವ್ಯಕ್ತಿ ನಾಪತ್ತೆ: ಶವ ಹುಡುಕಿ ಕೊಡುವಂತೆ ಆಗ್ರಹ

ಬಾಗಲಕೋಟೆ: ಜೂನ್ 11 ರಂದು ವ್ಯಕ್ತಿ ಕಾಣೆಯಾಗಿದ್ದು, ಕುಟುಂಬಸ್ಥರಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ. ಬೈಲಪ್ಪ ಮಾದರ(40)ಕಾಣೆಯಾದ ವ್ಯಕ್ತಿ. ಬಾಗಲಕೋಟೆ ಎಸ್​ಪಿ ಕಚೇರಿ ಮುಂದೆ ಕುಟುಂಬಸ್ಥರು, ದಲಿತ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ಮಾಡುತ್ತಿದ್ದು, ಶಂಕಿತ ವ್ಯಕ್ತಿಗಳ ಮೂಲಕ ಶವ ಹುಡುಕಿ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಕಣ್ಣೀರು ಹಾಕಿ ಪತ್ನಿ ಹಾಗೂ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಮಾಂತೇಶ್ ನಾಯಕ್ ಹಾಗೂ ಅವರ ಕೆಲಸಗಾರರ ಕೊಲೆ ಮಾಡಿದ್ದಾರೆ ಎಂದು ಬೈಲಪ್ಪ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಮಾಂತೇಶ್ ನಾಯಕ್ ಮನೆಯಲ್ಲಿ ಕೃಷಿ ಕಾರ್ಮಿಕನಾಗಿ ಬೈಲಪ್ಪ ಕೆಲಸ ಮಾಡುತ್ತಿದ್ದ. ಜೂನ್ ೧೧ ರಂದು ಸಂಜೆ ಊಟಕ್ಕೆ ಕರೆದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮಾಂತೇಶ್ ನಾಯಕ್​ನನ್ನು ಕೆರೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: India Post Recruitment 2022: 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್