Independence Day: ಧ್ವಜಾರೋಹಣಕ್ಕೆ ಕೆಪಿಸಿಸಿ ಕಚೇರಿಗೆ ನಗುಮೊಗದಿಂದ ಅಗಮಿಸಿದ ಸಿದ್ದರಾಮಯ್ಯ

Independence Day: ಧ್ವಜಾರೋಹಣಕ್ಕೆ ಕೆಪಿಸಿಸಿ ಕಚೇರಿಗೆ ನಗುಮೊಗದಿಂದ ಅಗಮಿಸಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 15, 2024 | 1:30 PM

ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾಗಿರುವ ಗೋವಿಂದರಾಜು ಮತ್ತು ಪ್ರಕಾಶ್ ರಾಠೋಡ್ ಮುಖ್ಯಮಂತ್ರಿಗಳ ನಿವಾಸದ ಪಕ್ಕದಲ್ಲೇ ಮನೆಗೆಳನ್ನು ಮಾಡಿಕೊಂಡಿರುವಂತಿದೆ, ಸಿದ್ದರಾಮಯ್ಯ ಯಾವುದೇ ಸಭೆ ಸಮಾರಂಭಗಳಲ್ಲಿ, ಕಾರ್ಯಕ್ರಮದಲ್ಲಿ ಭಾಗಿಯಾದರೂ ಇವರಿಬ್ಬರು ಜೊತೆಗಿರುತ್ತಾರೆ!

ಬೆಂಗಳೂರು: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮ. ಭಾರತ ದೇಶವು ಬ್ರಿಟಿಷರ ಸಾಮ್ರಾಜ್ಯದಿಂದ ಮುಕ್ತಗೊಂಡ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ರಸ್ತೆಗಳಲ್ಲಿ ಶಾಲಾ ಮಕ್ಕಳ ಪ್ರಭಾತ್ ಫೇರಿ ನೋಡಿದವರಲ್ಲಿ ರಾಷ್ಟ್ರಾಭಿಮಾನ ಉಕ್ಕುತ್ತಿದೆ. ದೊಡ್ಡ ದೊಡ್ಡ ಸೌಂಡ್ ಬಾಕ್ಸ್ ಮತ್ತು ಸ್ಪೀಕರ್ ಗಳಲ್ಲಿ ಕೇಳಿಬರುತ್ತಿರುವ ದೇಶಭಕ್ತಿ ಗೀತೆಗಳು ಮನಸ್ಸಿಗೆ ಮುದ ನೀಡುತ್ತಿವೆ. ಏತನ್ಮಧ್ಯೆ, ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಹೊತ್ತಿಗೆ ಮುಂಚೆ ಧ್ವಜಾರೋಹಣಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗೆ ಆಗಮಿಸಿದರು. ಅದಾಗಲೇ ಕಚೇರಿಗೆ ಆಗಮಿಸಿದ್ದ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ನಾಯಕರು ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು. ವಿರೋಧ ಪಕ್ಷಗಳ ನಾಯಕರ ಆರೋಪಗಳು, ಪ್ರತಿಭಟನೆ ಮತ್ತು ಪಾದಯಾತ್ರೆಗಳಿಂದ ಮನಶ್ಶಾಂತಿ ಕಳೆದುಕೊಂಡಿರುವ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ನಗುಮೊಗದಿಂದಲೇ ಆಗಮಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Independence Day 2024: ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್​ ತಿಳಿಯಿರಿ

Published on: Aug 15, 2024 10:30 AM