ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಖಡ್ಗ ಝಳಪಳಿಸಿದರು!

|

Updated on: Jan 26, 2024 | 2:26 PM

ನೆರೆದ ಜನರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣನ ಹಾಗೆ ಪ್ರಾಣವನ್ನು ಬಲಿದಾನ ಮಾಡಲು ಸಿದ್ಧ ಎಂಬ ಮನಸ್ಥಿತಿ ಯುವಕರಲ್ಲಿ ಬೆಳೆಯಬೇಕು ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣನಂಥವರು ಪ್ರತಿ ಮನೆಯಲ್ಲಿ ಹುಟ್ಟಬೇಕು, ಕುವೆಂಪು ಅವರು ಹೇಳಿದ ಹಾಗೆ ನಮ್ಮ ದೇಶ ಸರ್ವ ಜನಾಂಗಗಳ ಶಾಂತಿಯ ತೋಟವಾಗುವ ನಿಟ್ಟನೆಡೆ ಎಲ್ಲರೂ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 193ನೇ ಸ್ಮರಣೋತ್ಸವ (Krantiveera Sangolli Rayanna death anniversary) ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀ (Nirmalanandanatha Sri) ಭಾಗವಹಿಸಿದ್ದರು. ನಗರದ ಮೆಜೆಸ್ಟಿಕ್ ಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ (KSR circle) ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಿಗೆ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಕಂಬಳಿ ಹೊದಿಸಿ ಸನ್ಮಾನಿಸುವುದರ ಜೊತೆಗೆ ಒಂದು ಖಡ್ಗವನ್ನು ನೀಡಿ ಗೌರವಿಸಲಾಯಿತು. ಖಡ್ಗ ಕೈಗೆ ಸಿಕ್ಕ ಬಳಿಕ ಸಿದ್ದರಾಮಯ್ಯ ಅದನ್ನು ಮೇಲೆತ್ತಿ ಝಳಪಳಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ಧಾಣಕ್ಕೆ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ ಅಂತ ಮರುನಾಮಕಾರಣ ಸಹ ಮಾಡಲಾಯಿತು. ಬಳಿಕ ನೆರೆದ ಜನರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣನ ಹಾಗೆ ಪ್ರಾಣವನ್ನು ಬಲಿದಾನ ಮಾಡಲು ಸಿದ್ಧ ಎಂಬ ಮನಸ್ಥಿತಿ ಯುವಕರಲ್ಲಿ ಬೆಳೆಯಬೇಕು ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣನಂಥವರು ಪ್ರತಿ ಮನೆಯಲ್ಲಿ ಹುಟ್ಟಬೇಕು, ಕುವೆಂಪು ಅವರು ಹೇಳಿದ ಹಾಗೆ ನಮ್ಮ ದೇಶ ಸರ್ವ ಜನಾಂಗಗಳ ಶಾಂತಿಯ ತೋಟವಾಗುವ ನಿಟ್ಟನೆಡೆ ಎಲ್ಲರೂ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ