ಅನಂತಕುಮಾರ ಹೆಗಡೆ ಹೆಸರು ಪ್ರಸ್ತಾಪಿಸದೆ ಮೂರ್ಖ ಎಂದು ಜರಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Jan 17, 2024 | 5:08 PM

ಕಳೆದ ವಾರ ಹೆಗಡೆ, ಕಾರ್ಯಕರ್ತರ ಸಭೆಯೊಂದರಲ್ಲಿ ತನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರ ಬಗ್ಗೆ ಸಿದ್ದರಾಮಯ್ಯರಲ್ಲಿ ಸಿಟ್ಟು ಇನ್ನೂ ಆರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಆದರೆ ಸಂಸದರನ್ನು ಜರಿಯಲು ಅವರು ಬೇರೆ ವಿಷಯ ಆರಿಸಿಕೊಂಡರು.

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ (Sangolli Rayanna Utsav) ಭಾಗವಹಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸಂಸದ ಅನಂತಕುಮಾರ್ ಹೆಗಡೆಯವರ (Anantkumar Hegde) ಹೆಸರು ಪ್ರಸ್ತಾಪಿಸದೆಯೇ ಮೂರ್ಖ ಅಂತ ತಿವಿದರು. ಕಳೆದ ವಾರ ಹೆಗಡೆ, ಕಾರ್ಯಕರ್ತರ ಸಭೆಯೊಂದರಲ್ಲಿ ತನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರ ಬಗ್ಗೆ ಸಿದ್ದರಾಮಯ್ಯರಲ್ಲಿ ಸಿಟ್ಟು ಇನ್ನೂ ಆರಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಆದರೆ ಸಂಸದರನ್ನು ಜರಿಯಲು ಅವರು ಬೇರೆ ವಿಷಯ ಆರಿಸಿಕೊಂಡರು. ಅವನ್ಯಾರೋ ಮೂರ್ಖ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ, ಹಾಗಾಗಿ ಮಸೀದಿಗಳನ್ನು ಧ್ವಂಸ ಮಾಡಿ ದೇವಸ್ಥಾನಗಳನ್ನು ಕಟ್ಟಬೇಕು ಅನ್ನುತ್ತಾನೆ, ಇತಿಹಾಸ ಇದನ್ನೆಲ್ಲ ನಮಗೆ ಹೇಳುತ್ತದೆಯೇ? ಎಂದು ಹೇಳುವ ಮುಖ್ಯಮಂತ್ರಿ, ಇಂಥ ಮೂರ್ಖನ ಮಾತಿಗೂ ಜನ ಚಪ್ಪಾಳೆ ತಟ್ಟುತ್ತಾರೆ, ದಯವಿಟ್ಟು ಸಂಗೊಳ್ಳಿ ರಾಯಣ್ಣನಂಥವರಿಗೆ ಜನರಿಗೆ ಚಪ್ಪಾಳೆ ತಟ್ಟಿ, ದಾರಿ ತಪ್ಪಿಸುವ ಇಂಥ ಮೂರ್ಖರಿಗೆ ಬೇಡ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on