ಇದುವರೆಗೆ 15 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಡ್ಡರೇನೂ ಅಲ್ಲ: ಬಿವೈ ವಿಜಯೇಂದ್ರ, ಬಜೆಪಿ ರಾಜ್ಯಾಧ್ಯಕ್ಷ

|

Updated on: Feb 23, 2024 | 6:20 PM

ಸಿದ್ದರಾಮಯ್ಯ 2013ರಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾದಾಗಲೂ ರಾಜ್ಯದ ಮೇಲೆ ಸಾಲದ ಹೊರೆ ಇರಲಿಲ್ಲ, ಆದರೆ 2018ರಲ್ಲಿ ಅವರ ಟೆನ್ಯೂರ್ ಮುಗಿದಾಗ ರಾಜ್ಯದ ಸಾಲ ಬೆಟ್ಟದಷ್ಟಾಗಿತ್ತು ಎಂದು ವಿಜಯೇಂದ್ರ ಹೇಳಿದರು. ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯಲ್ಲೂ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು: ನಗರದಲ್ಲಿಂದು ಆಯೋಜಿಸಲಾದ ಒಬಿಸಿ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತಾಡಿದ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಅವರು ಕಳೆದ ಶುಕ್ರವಾರ ಮಂಡಿಸಿದ ಬಜೆಟ್ ಅನ್ನು (Budget) ಬಲವಾಗಿ ಟೀಕಿಸಿದರು. ಸಿದ್ದರಾಮಯ್ಯನವರಿಗೆ ರಾಜ್ಯದ ಸ್ಥಿತಿಗತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ, ಇದುವರೆಗೆ 15 ಬಜೆಟ್ ಗಳನ್ನು ಮಂಡಿಸಿರುವ ಅವರು ದಡ್ಡರಾಗಿರುವುದು ಸಾಧ್ಯವಿಲ್ಲ ಎಂದು ಹೇಳಿದ ವಿಜಯೇಂದ್ರ 1994-95 ಸಾಲಿನಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಮೊದಲ ಬಜೆಟ್ ಮಂಡಿಸಿದಾಗ ರಾಜ್ಯದ ಹಣಕಾಸು ಸ್ಥಿತಿ ಚೆನ್ನಾಗಿತ್ತು, ಅದರೆ ಅವರ ಅವಧಿ ಮುಗಿಯುವ ಹೊತ್ತಿಗೆ ರಾಜ್ಯ ಸಾಲದ ಸುಳಿಗೆ ಸಿಕ್ಕಿತ್ತು ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಸಿದ್ದರಾಮಯ್ಯ 2013ರಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾದಾಗಲೂ ರಾಜ್ಯದ ಮೇಲೆ ಸಾಲದ ಹೊರೆ ಇರಲಿಲ್ಲ, ಆದರೆ 2018ರಲ್ಲಿ ಅವರ ಟೆನ್ಯೂರ್ ಮುಗಿದಾಗ ರಾಜ್ಯದ ಸಾಲ ಬೆಟ್ಟದಷ್ಟಾಗಿತ್ತು ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯಲ್ಲೂ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on