Loading video

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ್ತ್​ಡೇ ದೆಹಲಿಯಲ್ಲಿ, ಹೆಚ್ಚು ಸಂಭ್ರಮಿಸಿದ್ದು ಡಿಕೆ ಸಹೋದರರು!

|

Updated on: Aug 03, 2023 | 5:57 PM

ಹಿಂದೆ ನಿಂತಿದ್ದ ಸಚಿವ ಎಂಬಿ ಪಾಟೀಲ್ ಮುಂದಿದ್ದದವರನ್ನು ದೂಡುತ್ತಾ ಧಾವಂತದಲ್ಲಿ ಮುಂದೆ ಬಂದು ಕೆಮೆರಾಗೆ ಪೋಸ್ ನೀಡುವುದು ತಮಾಷೆ ಅನಿಸುತ್ತದೆ.

ದೆಹಲಿ: ಕಳೆದ ವರ್ಷ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ (Siddaramotsav) ನೆನಪಿದೆಯ? ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಇಂದು ಮತ್ತೊಂದು ಹುಟ್ಟುಹಬ್ಬ, 76ನೇಯದ್ದು. ಆದರೆ ಅವರ ಈ ವರ್ಷದ ಬರ್ತ್ ಡೇ ದೂರದ ದೆಹಲಿಯಲ್ಲಿ ಆಚರಿಸಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಅವರ ಸಹೋದರ ಹಾಗೂ ಸಂಸದ ಡಿಕೆ ಸುರೇಶ್ (DK Suresh)-ಸಿದ್ದರಾಮಯ್ಯನವರಿಗೆ ಬೋಕೆ ನೀಡಿ ಹಾರೈಸುವಾಗ ಬರ್ತ್ ಡೇ ಬಾಯ್ ಗಿಂತ ಅವರೇ ಜಾಸ್ತಿ ಖುಷಿಯಲಿದ್ದರು! ಶಿವಕುಮಾರ್, ಸಿದ್ದರಾಮಯ್ಯರ ಕೈ ಹಿಡಿದು ಮುಂದೆ ಕರೆದುಕೊಂಡು ಬರೋದನ್ನು ನೋಡಿದರೆ ಅದು ಗೊತ್ತಾಗುತ್ತದೆ. ನಂತರ ಸಹೋದರರಿಬ್ಬರು ಮುಖ್ಯಮಂತ್ರಿಯವರ ಕೈ ಕುಲುಕಿ ಶುಭ ಹಾರೈಸುತ್ತಾರೆ. ಹಿಂದೆ ನಿಂತಿದ್ದ ಸಚಿವ ಎಂಬಿ ಪಾಟೀಲ್ ಮುಂದಿದ್ದದವರನ್ನು ದೂಡುತ್ತಾ ಧಾವಂತದಲ್ಲಿ ಮುಂದೆ ಬಂದು ಕೆಮೆರಾಗೆ ಪೋಸ್ ನೀಡುವುದು ತಮಾಷೆ ಅನಿಸುತ್ತದೆ. ಕೊನೆಯಲ್ಲಿ ಅವರು ಸುರೇಶ್ ಕೈ ಕುಲುಕುವುದನ್ನು ಗಮನಿಸಿ. ಶೇಕ್ ಮಾಡುವುದೋ ಬೇಡ್ವೋ ಅನ್ನುವ ಹಾಗಿದೆ ಅವರ ವರ್ತನೆ. ಅವರಿಬ್ಬರ ನಡುವಿನ ತೂ ತೂ ಮೈ ಮೈ ಕನ್ನಡಿಗರಿಗೆಲ್ಲ ಗೊತ್ತು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ