ವರುಣಾ ಕ್ಷೇತ್ರದ ಕಾರ್ಯಕ್ರಮದಲ್ಲೇ ಅರ್ಧಕ್ಕೆ ಎದ್ದುಹೋಗದಂತೆ ಜನರಿಗೆ ಸಿದ್ದರಾಮಯ್ಯ ಮನವಿ ಮಾಡಿದರು!

|

Updated on: Apr 01, 2024 | 5:34 PM

ಬೇರೆ ಸಮಯದಲ್ಲಾಗಿದ್ರೆ ಅವರು, ಗದರಿಬಿಡುತ್ತಿದ್ದರು. ಏಯ್ ಕೂತ್ಕೊಳ್ರಯ್ಯ ಅಂತ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು. ಅದರೆ ಇದು ಚುನಾವಣೆ ಸಮಯ, ಗದರುವಂತಿಲ್ಲ! ತನ್ನ ಕ್ಷೇತ್ರದಲ್ಲೇ ಹೀಗಾದರೆ ಬಹಳ ತಪ್ಪು ಸಂದೇಶ ರವಾನೆಯಾಗುತ್ತದೆ, ಸಭೆ ಮುಗಿಯುವರೆಗೆ ಯಾರೂ ಎದ್ದು ಹೋಗಬೇಡಿ, ಎಲ್ಲರ ಭಾಷಣ ಕೇಳಬೇಕು ಅಂತ ಅವರು ಹೇಳುತ್ತಾರೆ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ವರುಣಾ ಕ್ಷೇತ್ರದಲ್ಲಿ (Varuna Assembly Constituency) ಕಾರ್ಯಕ್ರಮವೊಂದನ್ನು ನಡೆಸುವಾಗ ಜನ ಎದ್ದುಹೋಗುತ್ತಾರೆಯೇ? ಹೌದು ಸ್ವಾಮಿ ಅಂಥದೊಂದು ಸಂದರ್ಭ ಮುಖ್ಯಮಂತ್ರಿಯವರಿಗೆ ಇಂದು ಎದುರಾಯಿತು. ಜನ ಎದ್ದು ಹೊಗದಂತೆ ತಡೆಯಲು ಖುದ್ದು ಅವರೇ ಎದ್ದು ಬಂದು ಮನವಿ (plead) ಮಾಡಬೇಕಾಯಿತು. ದಯಮಾಡಿ ಯಾರೂ ಎದ್ದು ಹೋಗಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಅಂತ ಅವರು ಹೇಳುತ್ತಾರೆ. ಬೇರೆ ಸಮಯದಲ್ಲಾಗಿದ್ರೆ ಅವರು, ಗದರಿಬಿಡುತ್ತಿದ್ದರು. ಏಯ್ ಕೂತ್ಕೊಳ್ರಯ್ಯ ಅಂತ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು. ಅದರೆ ಇದು ಚುನಾವಣೆ ಸಮಯ, ಗದರುವಂತಿಲ್ಲ! ತನ್ನ ಕ್ಷೇತ್ರದಲ್ಲೇ ಹೀಗಾದರೆ ಬಹಳ ತಪ್ಪು ಸಂದೇಶ ರವಾನೆಯಾಗುತ್ತದೆ, ಸಭೆ ಮುಗಿಯುವರೆಗೆ ಯಾರೂ ಎದ್ದು ಹೋಗಬೇಡಿ, ಎಲ್ಲರ ಭಾಷಣ ಕೇಳಬೇಕು ಅಂತ ಅವರು ಹೇಳುತ್ತಾರೆ. ವರುಣಾ ಕ್ಷೇತ್ರ ಆದರೆ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆಯಿತು. ಸಮಾವೇಶದಲ್ಲಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಡಾ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ದರ್ಶನ ಧ್ರುವನಾರಾಯಣ್, ಗಣೇಶ್, ಆರ್ ಕೃಷ್ಣಮೂರ್ತಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಅಮಿತ್ ಶಾರನ್ನು ಅವಮಾನಿಸುವ ಉದ್ದೇಶದಿಂದ ಯತೀಂದ್ರ ಕಾಮೆಂಟ್ ಮಾಡಿಲ್ಲ: ಸಿದ್ದರಾಮಯ್ಯ