ಲೋಕಾಯಕ್ತ ವಿಚಾರಣೆಗೆ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖದಲ್ಲಿ ಆತಂಕ ಕಾಣಲಿಲ್ಲ
ಲೋಕಾಯುಕ್ತ ಕಚೇರಿ ಆವರಣ ಪ್ರವೇಶಿಸುವಾಗ ಮುಖ್ಯಮಂತ್ರಿಯವರ ಮುಖದಲ್ಲಿ ಆತಂಕ, ದುಗುಡ ಕಾಣಲಿಲ್ಲ, ಅವರು ನಿರಾಳರಾಗಿದ್ದರು. ಆದರೆ, ಲೋಕಾಯುಕ್ತ ಅಧಿಕಾರಿಗಳು ನಡೆಸುವ ವಿಚಾರಣೆಯ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಲಾರದು ಅಂತ ಕೃಷ್ಣ ಹೇಳಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಚಾರಣೆ ಎದುರಿಸಲು ನಗರದ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೋಮವಾರದಂದು ಕರ್ನಾಟಕ ಲೋಕಾಯುಕ್ತದ ಮೈಸೂರು ಕಚೇರಿ ಮುಖ್ಯಮಂತ್ರಿಯವರಿಗೆ ನೋಟೀಸ್ ನೀಡಿತ್ತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯಪಾಲರಿಗೆ ನೀಡಿರುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ವಿಚಾರಣೆ ನಡೆಸುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ ಕೇಸ್: ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಸಿಎಂಗೆ ಶುರುವಾಯ್ತು ಇಡಿ ಸಂಕಷ್ಟ!
Published on: Nov 06, 2024 11:14 AM