Mysuru News: ವರುಣ ಕ್ಷೇತ್ರದ ಜನರಿಗೆ ಯತೀಂದ್ರ ಸಿದ್ದರಾಮಯ್ಯ ಅಂದ್ರೆ ಪ್ರಾಣ, ಸೇಬುಹಣ್ಣುಗಳೆಂದರೆ ಪಂಚಪ್ರಾಣ!
ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದಿದ್ದರೂ ಯತೀಂದ್ರ ಸಿದ್ದರಾಮಯ್ಯ ಇವತ್ತು ವರುಣ ಕ್ಷೇತ್ರದ ತುಂಬಲ ಮತ್ತು ಕೆಂಪಯ್ಯನಹುಂಡಿಯಲ್ಲಿ ನಡೆದ ಎರಡು ಸರ್ಕಾರೀ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು
ಮೈಸೂರು: ವರುಣ ಕ್ಷೇತ್ರದ ಜನರಿಗೆ ತಮ್ಮ ಶಾಸಕ ಸಿದ್ದರಾಮಯ್ಯನವರ (Siddaramaiah) ಮಗ ಯತೀಂದ್ರ ಸಿದ್ದರಾಮಯ್ಯಗಿಂತ (Yatindra Siddaramaiah) ಹೆಚ್ಚು ಸೇಬು ಹಣ್ಣುಗಳ (apple) ಮೇಲೆ ಪ್ರೀತಿ ಅಂತ ಅನಿಸುತ್ತೆ ಮಾರಾಯ್ರೇ. ಮೊದಲು ಮುಖ್ಯ ವಿಷಯ ಮಾತಾಡೋಣ. ಯತೀಂದ್ರ ಸಿದ್ದರಾಮಯ್ಯ ಇವತ್ತು ವರುಣ ಕ್ಷೇತ್ರದ ತುಂಬಲ ಮತ್ತು ಕೆಂಪಯ್ಯನಹುಂಡಿಯಲ್ಲಿ ನಡೆದ ಎರಡು ಸರ್ಕಾರೀ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದಿದ್ದರೂ ಯತೀಂದ್ರ ಅದ್ಹೇಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು ಅಂತ ನಿಮ್ಮ ಪ್ರಶ್ನೆಯಾಗಿರಬಹುದು. ನಿಮ್ಮ ಪ್ರಶ್ಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರಿಸಬೇಕು. ಓಕೆ, ಮೈಸೂರು ಜಿಲ್ಲೆಯಲ್ಲಿ ಯತೀಂದ್ರ ಸಾಕಷ್ಟು ಜನಪ್ರಿಯರು ಅನ್ನೋದು ಗೊತ್ತಿರುವ ವಿಚಾರವೇ. ಆದರೆ, ವಿಡಿಯೋದಲ್ಲಿ ಕಾಣಿತ್ತಿರುವ ಜನಕ್ಕೆ ಯತೀಂದ್ರ ಮೇಲೆ ಅಭಿಮಾನವಿದ್ದರೂ ಸೇಬುಹಣ್ಣುಗಳ ಮೇಲೆ ಜಾಸ್ತಿ ಪ್ರೀತಿ ಇದೆ! ಹಣ್ಣಿಗಾಗಿ ಅವರು ತಮ್ಮ ನೆಚ್ಚಿನ ನಾಯಕನನ್ನೇ ದೂಡುತ್ತಿರುವು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ