Mysuru; ಸರ್ಕಾರ ನನಗೊಂದು ಸ್ಥಾನಮಾನ ನೀಡಿದರೆ ಅಧಿಕಾರಿಗಳೊಂದಿಗೆ ಕ್ಷೇತ್ರ ಸುತ್ತುವುದು ಸಾಧ್ಯವಾಗುತ್ತದೆ: ಯತೀಂದ್ರ ಸಿದ್ದರಾಮಯ್ಯ
ತಂದೆಯವರು ಬಜೆಟ್ ಮಂಡನೆ ಸಿದ್ಧತೆಯಲ್ಲಿ ತೊಡಗಿರುವುದರಿಂದ ಯಾವುದಾದರೂ ಸಣ್ಣಪುಟ್ಟ ಸ್ಥಾನಮಾನ ಕೊಡಿ ಅಂತ ಕೇಳಲಾಗುತ್ತಿಲ್ಲ ಎಂದು ಯತೀಂದ್ರ ಹೇಳಿದರು.
ಮೈಸೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ರಾಜ್ಯ ಸರ್ಕಾರ ತನಗೆ ಯಾವುದೇ ಸರ್ಕಾರೀ ಸ್ಥಾನಮಾನ ಕೊಟ್ಟಿರದ ಕಾರಣ ಅಧಿಕಾರಿಗಳೊಂದಿಗೆ (officials) ಹೋಗಿ ಜನರ ಕಷ್ಟ ಸುಖಗಳನ್ನು ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತೀಂದ್ರ, ಬೆಂಗಳೂರು ಮತ್ತು ಮೈಸೂರಲ್ಲಿ ಜನ ತಮ್ಮನ್ನು ಕಾಣಲು ಬರುತ್ತಾರೆ ಮತ್ತು ತಂದೆಯವರು ಮುಖ್ಯಮಂತ್ರಿಯಾದಾಗಿನಿಂದ ಭೇಟಿಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಹೇಳಿದರು. ಕಳೆದ ಬಾರಿ ಸಿದ್ದರಾಮಯ್ಯನವರು (Siddaramaiah) ಸಿಎಂ ಆಗಿದ್ದಾಗ ಆಶ್ರಯ ಸಮಿತಿ ಅಧ್ಯಕ್ಷನಾಗಿ ನೇಮಕ ಮಾಡಿದ್ದರಿಂದ ಅಧಿಕಾರಿಗಳೊಂದಿಗೆ ಕ್ಷೇತ್ರದಲ್ಲಿ ಸುತ್ತಲು ಅವಕಾಶವಿತ್ತು, ಆದರೆ ಈಗ ಅದು ಆಗುತ್ತಿಲ್ಲ. ತಂದೆಯವರು ಬಜೆಟ್ ಮಂಡನೆ ಸಿದ್ಧತೆಯಲ್ಲಿ ತೊಡಗಿರುವುದರಿಂದ ಯಾವುದಾದರೂ ಸಣ್ಣಪುಟ್ಟ ಸ್ಥಾನಮಾನ ಕೊಡಿ ಅಂತ ಕೇಳಲಾಗುತ್ತಿಲ್ಲ ಎಂದು ಯತೀಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos