ಗ್ಯಾರಂಟಿ ಯೋಜನೆ; ರಾಮನಗರದಲ್ಲಿ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಖಡಕ್ ಟಾಂಗ್
5 ಗ್ಯಾರಂಟಿಗಳನ್ನ ಕೊಡುವ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಇಲ್ಲೋ, ಇದನ್ನ ಕುಮಾರಸ್ವಾಮಿಯವರು ಕೊಡ್ತೀದ್ರಾ ಎನ್ನುವ ಮೂಲಕ ರಾಮನಗರದಲ್ಲಿ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಾಮನಗರ: ನಾವು ಚುನಾವಣೆಗಿಂತ ಮೊದಲು ಐದು ಗ್ಯಾರೆಂಟಿಗಳಿಗೆ ಮಾತ್ ಕೊಟ್ಟಿದ್ವಿ, ಇದೀಗ ಎಲ್ಲಾ ಹೆಣ್ಮಕ್ಳು ಸರ್ಕಾರಿ ಬಸ್ಲ್ಲಿ ಓಡಾಡ್ತಾ ಇದೀರಲ್ಲ. ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ. ಮುಂದಕ್ಕೆ ನಿಮಗೆ ಸೊನ್ನೆ ಬಿಲ್ಲು. 10 ಕೆ.ಜಿ ಮಾತ್ ಕೊಟ್ಟಿದ್ದೊ ಈ ತಿಂಗಳಿನಿಂದ 5 ಕೆಜಿ ಕೊಡ್ತಾ ಇದ್ದೀವಿ, ಇನ್ನು 5 ಕೆ.ಜಿಗೆ ಹಣ ಕೊಡ್ತಾ ಇದ್ದೀವಿ. ಇನ್ನು 14 ನೇ ತಾರಿಖಿನಿಂದ ಭಾಗ್ಯದ ಲಕ್ಷ್ಮಿ ಬಾರಮ್ಮ ಆ ದೇವಿ ನಿಮಗೆ ಪ್ರತಿ ಹೆಣ್ಮಗಳಿಗೆ 2 ಸಾವಿರ ರೂ ಅಕೌಂಟಿಗೆ ಕೊಡುತ್ತಿದ್ದಾಳೆ. ಈ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇನೆ ಇಲ್ಲೋ, ಇದನ್ನ ಕುಮಾರಸ್ವಾಮಿ (Kumarswamy)ಯವರು ಕೊಡ್ತೀದ್ರಾ ಎನ್ನುವ ಮೂಲಕ ರಾಮನಗರದಲ್ಲಿ ಡಿಕೆ ಶಿವಕುಮಾರ್(DK shivakumar) ಟಾಂಗ್ ಕೊಟ್ಟಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos