ಆರ್ಥಿಕ ಹೊಣೆಗಾರಿಕೆ ಅಧಿನಿಯಮವನ್ನು ಸದನದಲ್ಲಿ ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Mar 13, 2025 | 3:42 PM

ಸಿದ್ದರಾಮಯ್ಯ ಸದನಕ್ಕೆ ಬರುವ ಮೊದಲು ಮುಖ್ಯಮಂತ್ರಿ ಎಲ್ಲಿ ಎಂದು ಗಲಾಟೆ ಮಾಡುತ್ತಿದ್ದ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಸಿಎಂ ಆಗಮಿಸಿದ ನಂತರವೂ ಅದನ್ನು ಮುಂದುವರಿಸುತ್ತಾರೆ. 2017ರಲ್ಲಿ ತಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ, ಅದರಿಂದ ವಿಮುಖನಾಗಿಲ್ಲ ಅಂತ ಸಿಎಂ ಹೇಳಿದಾಗ, ಶಾಸಕ ವಿಮುಖರಾಗಿದ್ದೀರಿ ಅನ್ನುತ್ತಾರೆ. ಸಿದ್ದರಾಮಯ್ಯ, ನಾನು ಹೇಳೋದನ್ನು ಪೂರ್ತಿ ಕೇಳಿಸಿಕೋ ತಮ್ಮಾ ಎಂದಾಗ ಎಲ್ಲರೂ ನಗುತ್ತಾರೆ.

ಬೆಂಗಳೂರು, 13 ಮಾರ್ಚ್: ಸದನದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ (Fiscal Responsibility Act) ಬಗ್ಗೆ ವಿವರಣೆ ನೀಡಿದರು. ರಾಜ್ಯವೊಂದರ ಆರ್ಥಿಕ ಪರಿಸ್ಥಿತಿ ಅರೋಗ್ಯಕರವಾಗಿದೆ ಅನ್ನೋದನ್ನು ದೃಢಪಡಿಸಿಕೊಳ್ಳಲು ಮೂರು ಮಾನದಂಡಗಳನ್ನು ಗಮನಿಸಬೇಕು; ಆ ನಿರ್ದಿಷ್ಟ ರಾಜ್ಯದ ಆದಾಯ ಹೆಚ್ಚುವರಿ ಆಗಿರಬೇಕು, ವಿತ್ತೀಯ ಕೊರತೆ ಶೇಕಡ 3 ನ್ನು ಮೀರಿರಬಾರದು ಮತ್ತು ಸಾಲದ ಪ್ರಮಾಣ ಶೇಕಡ 25ಕ್ಕಿಂತ ಕಡಿಮೆ ಇರಬೇಕು, ಅಗಷ್ಟೇ ಆ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಅಂತ ಹೇಳಬಹುದು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವಿರೋಧ ಪಕ್ಷದ ನಾಯಕರು ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಓದಿಕೊಂಡಿರುತ್ತಾರೆ ಅಂತ ಭಾವಿಸುವುದಾಗಿ ಸಿಎಂ ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಸ್ಲಿಮರಿಗೆ ಸಿದ್ದರಾಮಯ್ಯ ಭರ್ಜರಿ ಕೊಡುಗೆ? ಮೀಸಲಾತಿ ಶೇ 10ಕ್ಕೆ ಏರಿಕೆ ಮನವಿ ಬಗ್ಗೆ ಪರಿಶೀಲನೆಗೆ ಜಮೀರ್ ಸೂಚನೆ