ಕೇಂದ್ರದಿಂದ ಬಿಡುಗಡೆಯಾಗದ ಬರಪರಿಹಾರ ನಿಧಿ, ಅಸಹಾಯಕತೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

|

Updated on: Jan 24, 2024 | 5:16 PM

ತಮ್ಮ ಸರ್ಕಾರ ತಾತ್ಕಾಲಿಕ ಪರಿಹಾರವಾಗಿ ರೈತರಿಗೆ ಎರಡೆರಡು ಸಾವಿರ ರೂ. ಗಳನ್ನು ನೀಡಲು ತಯಾರಿ ಮಾಡಿಕೊಂಡಿದ್ದು ಅದಕ್ಕಾಗಿ 550 ಕೋಟಿ ರೂ. ತೆಗೆದಿರಿಸಲಾಗಿದೆ ಮತ್ತು ಮುಂದಿನ ಒಂದು ವಾರದೊಳಗಾಗಿ ಹಣ ರೈತರ ಕೈ ಸೇರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಡಿಕೇರಿ: ತಮ್ಮ ಸಚಿವ ಸಂಪುಟದ ಕೆಲ ಸದಸ್ಯರೊಂದಿಗೆ ಕೊಡುಗು ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕೇಂದ್ರ ಸರ್ಕಾರ ಬರ ಪರಿಹಾರ ನಿಧಿ ಬಿಡುಗಡೆ (drought relief fund) ಮಾಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕಳೆದ ತಿಂಗಳು ತಾನು ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದಾಗ ಗೃಹ ಸಚಿವರು, ಡಿಸೆಂಬರ್ 23 ರಂದು ಸಭೆಯೊಂದನ್ನು ನಡೆಸಿ ಕೂಡಲೇ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಏತನ್ಮಧ್ಯೆ ಅವರು ಮತ್ತೊಂದು ಸಭೆಯನ್ನು ಕರೆದಿದ್ದರು ಅದರೆ ಕಾರಣಾಂತರಗಳಿಂದ ಮುಂದೂಡಲಾಯಿತು ಎಂದು ಹೇಳಿದರು.

ಮೊನ್ನೆ ಪ್ರಧಾನ ಮಂತ್ರಿ ಅವರು ಬೆಂಗಳೂರಿಗೆ ಬಂದಾಗ ಬರ ಪರಿಹಾರ ನಿಧಿಯ ಬಗ್ಗೆ ಅವರಿಗೆ ಮತ್ತೊಮ್ಮೆ ಮನವಿ ಮಾಡಿರುವೆನೆಂದು ಮುಖ್ಯಮಂತ್ರಿ ಹೇಳಿದರು. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ನೀತಿ ಸಂಹಿತೆ ಜಾರಿಗೆ ಬಂದರೆ ಪರಿಹಾರ ನಿಧಿ ಸಿಗೋದು ಮತ್ತೂ ವಿಳಂಬವಾಗುತ್ತದಲ್ಲ ಸರ್ ಅಂದಾಗ ಮುಖ್ಯಮಂತ್ರಿ ಪಕ್ಕದಲ್ಲಿದ್ದ ಡಿಕೆ ಶಿವಕುಮಾರ್ ಕುಡಿಯುವ ನೀರಿನ ಸಮಸ್ಯೆ ಮತ್ತು ಬರದ ಸ್ಥಿತಿಗೆ ನೀತಿಸಂಹಿತೆ ಅನ್ವಯಿಸುವುದಿಲ್ಲ ಎಂದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ತಮ್ಮ ಸರ್ಕಾರ ತಾತ್ಕಾಲಿಕ ಪರಿಹಾರವಾಗಿ ರೈತರಿಗೆ ಎರಡೆರಡು ಸಾವಿರ ರೂ. ಗಳನ್ನು ನೀಡಲು ತಯಾರಿ ಮಾಡಿಕೊಂಡಿದ್ದು ಅದಕ್ಕಾಗಿ 550 ಕೋಟಿ ರೂ. ತೆಗೆದಿರಿಸಲಾಗಿದೆ ಮತ್ತು ಮುಂದಿನ ಒಂದು ವಾರದೊಳಗಾಗಿ ಹಣ ರೈತರ ಕೈ ಸೇರಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ