ಮುಖ್ಯಮಂತ್ರಿ ಪ್ರಗತಿ ಪರಿಶೀಲನಾ ಸಭೆ, ಸಮಯಕ್ಕೆ ಸರಿಯಾಗಿ ಆಗಮಿಸದ ಡಿಸಿಎಂ ಮತ್ತು ಕೆಲ ಸಚಿವರು

Updated on: May 31, 2025 | 1:27 PM

ಮಿನಿಸ್ಟ್ರುಗಳಿಗೆ ಕಾಯಲಾರಂಭಿಸುವ ಹಾಜರಿದ್ದ ಸಚಿವರು ಮತ್ತು ಅಧಿಕಾರಿಗಳು ತಮ್ಮ ಮುಂದಿದ್ದ ಸ್ನ್ಯಾಕ್ಸ್ ತಿನ್ನಲು ಶುರುಮಾಡುತ್ತಾರೆ. ಸಭೆಗೆ ಹಾಜರಿರುವವರ ಪೈಕಿ ಹೆಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಕೆಹೆಚ್, ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಡಾ ಎಂಸಿ ಸುಧಾಕರ್, ಬೋಸರಾಜು, ಶರಣಬಸಪ್ಪ ದರ್ಶನಾಪುರ, ಸಂತೋಷ್ ಲಾಡ್ ಮೊದಲಾದವರು ಕಾಣಿಸುತ್ತಾರೆ.

ಬೆಂಗಳೂರು, ಮೇ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ (Progress Review Meeting) ನಡೆಸಿದರು. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬೇರೆ ಕೆಲ ಸಚಿವರು ಸಭೆ ಆರಂಭವಾದರೂ ಬಾರದೆ ಹೋಗಿದ್ದು ಸಿಎಂರನ್ನು ರೇಗಿಸಿತು. ಸಭೆ ಆರಂಭಿಸುವ ಸೂಚನೆ ಅವರು ನೀಡುತ್ತಾರಾದರೂ ತಮ್ಮ ಎಡಪಕ್ಕದ ಕುರ್ಚಿ ಮತ್ತು ಬೇರೆ ಕೆಲ ಆಸನಗಳು ಖಾಲಿ ಇರೋದನ್ನು ನೋಡಿ ಸ್ವಲ್ಪ ತಡೀರಿ ಎಂದು ಹೇಳುತ್ತಾರೆ. ಎಲ್ರೀ ಇವರೆಲ್ಲ ಅಂತ ಅವರು ಕೇಳಿದಾಗ ಕಂದಾಯ ಸಚಿವ ಕೃಷ್ಣ ಭೈರೇಗೌಡ, ತಡಮಾಡಿ ಬಂದವರಿಗೆ ನೀವು ದಂಡ ಹಾಕಲ್ಲ ಅಂತ ನಗುತ್ತಾ ಹೇಳುತ್ತಾರೆ. ದಂಡ ಹಾಕೋ ಪ್ರಶ್ನೆ ಅಲ್ಲ ಎಂದು ರಾಗ ಎಳೆಯುತ್ತ ನಮ್ಮ ಡೆಪ್ಯುಟಿ ಸಿಎಂ ಅವರೇ ಬಂದಿಲ್ಲ ಎಂದಾಗ ಪರಮೇಶ್ವರ್ ನಗುತ್ತಾರೆ.

ಇದನ್ನೂ ಓದಿ:   ಆರ್ಮಿ ಕ್ಯಾಂಟೀನ್​ಗಳಿಗೆ ಅಬಕಾರಿ ಸುಂಕ ವಿಧಿಸಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ