ನೀನು ಪ್ರಯೋಜನ ಇಲ್ಲ ಬಿಡಮ್ಮಾ: ಪ್ಯೂರ್ ವೆಜ್ಟೇರಿಯನ್ ಎಂದ ಪತ್ರಕರ್ತೆ ಜತೆ ಸಿದ್ದರಾಮಯ್ಯ ಹಾಸ್ಯ!
ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ‘ಬ್ರೇಕ್ಫಾಸ್ಟ್ ಮೀಟಿಂಗ್’ಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಸಾರು ಸವಿದಿದ್ದರ ಬಗ್ಗೆ ಚರ್ಚೆಯಾಗಿತ್ತು. ಇದೇ ವಿಚಾರವಾಗಿ, ಜಂಟಿ ಪತ್ರಿಕಾಗೋಷ್ಠಿ ವೇಳೆ ಸಿದ್ದರಾಮಯ್ಯ ಹಾಸ್ಯಮಯವಾಗಿ ಮಾತನಾಡಿ ಪತ್ರಕರ್ತೆಯೊಬ್ಬರ ಕಾಲೆಳೆದಿದ್ದು ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 3: ಡಿಸಿಎಂ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ತೆರಳಿ ಮಂಗಳವಾರ ಬೆಳಗ್ಗೆ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ನಂತರ ಜಂಟಿ ಪತ್ರಿಕಾಗೋಷ್ಠಿ ವೇಳೆ ಪತ್ರರ್ತೆಯೊಬ್ಬರ ಕಾಲೆಳೆದಿರುವುದು ಈಗ ಸಖತ್ ವೈರಲ್ ಆಗುತ್ತಿದೆ. ನಾಟಿ ಕೋಳಿ ಸಾರಿನ ಬಗ್ಗೆ ಪತ್ರಕರ್ತರು ಸಿದ್ದರಾಮಯ್ಯ ಅವರನ್ನು ತಮಾಷೆಯಾಗಿ ಪ್ರಶ್ನಿಸುತ್ತಾರೆ. ಆಗ ಅವರು ಪತ್ರಕರ್ತೆಯೊಬ್ಬರ ಬಳಿ, ನೀನು ನಾನ್ವೆಜ್ ತಿಂತಿಯಾ ಎಂದು ಪ್ರಶ್ನಿಸಿದ್ದಾರೆ. ಆಕೆ, ‘ಇಲ್ಲ ಸರ್, ನಾನು ಪ್ಯೂರ್ ವೆಜ್’ ಎಂದಿದ್ದಾರೆ. ಪ್ರತಿಯಾಗಿ, ಏನದು ಪ್ಯೂರ್ ಎಂದು ಸಿಎಂ ಪ್ರಶ್ನಿಸಿದ್ದಾರೆ. ಮೊಟ್ಟೆ ಕೂಡ ತಿನ್ನಲ್ಲ ಎಂದು ಪತ್ರಕರ್ತೆ ಹೇಳುತ್ತಾರೆ. ಆಗ ಸಿಎಂ, ನೀನು ಪ್ರಯೋಜನ ಇಲ್ಲ ಹಾಗಾದರೆ, ಪ್ರಯೋಜನ ಇಲ್ಲ ಬಿಡಮ್ಮ ಎಂದು ನಗುತ್ತಾ ಹೇಳಿದ್ದಾರೆ. ಆಗ ಎಲ್ಲೂ ಗೊಳ್ಳೆಂದು ನಗಾಡಿದ್ದಾರೆ. ವಿಡಿಯೋ ಇಲ್ಲಿದೆ.