ಅಭಿಮಾನಿ ಘೋಷಣೆ ಕೂಗಿದ್ದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ

Edited By:

Updated on: Nov 03, 2025 | 2:24 PM

ದೇವರಾಜ ಅರಸು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಅಭಿಮಾನಿಯೋರ್ವ ಘೋಷಣೆ ಕೂಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಸಿಟ್ಟಾದ ಪ್ರಸಂಗ ನಡೆದಿದೆ. ಅಂದು ಅರಸು, ಇಂದು ಸಿದ್ದರಾಮಯ್ಯ ಎಂದು ಅಭಿಮಾನಿ ಘೊಷಣೆ ಕೂಗಿದ್ದಕ್ಕೆ ಗರಂ ಆದ ಸಿಎಂ, ನನಗೂ ದೇವರಾಜ ಅರಸು ಅವರಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ

ಮೈಸೂರು, ನವೆಂಬರ್​ 03: ದೇವರಾಜ ಅರಸು ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಅಂದು ದೇವರಾಜ ಅರಸು, ಇಂದು ಸಿದ್ದರಾಮಯ್ಯ ಎಂದು ಅಭಿಮಾನಿ ಘೋಷಣೆ ಕೂಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆದಿದೆ. ಮೈಸೂರು ಡಿಸಿ ಕಚೇರಿ ಆವರಣದಲ್ಲಿ ನಡೆದ ಅರಸು ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಲು ಬರುತ್ತಿದ್ದಂತೆ ಅಭಿಮಾನಿ ಕಂಸಾಳೆ ರವಿ ಘೋಷಣೆ ಕೂಗಿದ್ದಾರೆ. ಈ ವೇಳೆ ಗರಂ ಆದ ಸಿಎಂ, ಘೋಷಣೆ ಕೂಗಿದವರು ಯಾರು ಎಂದು ಗದರಿದ್ದಾರೆ. ನನಗೂ ದೇವರಾಜ ಅರಸು ಅವರಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.