ಬಿಳಿವರ್ಣದ ಹೆಲಿಕಾಪ್ಟರ್​ನಲ್ಲಿ ಹೆಚ್ ಡಿ ಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Updated on: May 12, 2025 | 2:27 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಜೊತೆ ಭಾರತದ ಯುದ್ಧ, ಕದನವಿರಾಮ, ಕದನವಿರಾಮ ಘೋಷಣೆ ನಂತರವೂ ಪಾಕಿಗಳು ಶೆಲ್ಲಿಂಗ್ ಮತ್ತು ಫೈರಿಂಗ್ ಮಾಡುತ್ತಿರುವ ವಿಷಯಗಳ ಬಗ್ಗೆ ಅಳೆದು ತೂಗಿ ಮಾತಾಡುತ್ತಿದ್ದಾರೆ. ವಿವಾದ ಸೃಷ್ಟಿಸಬಹುದೆನ್ನುವ ವಿಚಾರಗಳಿಗೆ ಅವರ ಉತ್ತರಿಸುವ ಗೋಜಿಗೆ ಹೋಗುತ್ತಿಲ್ಲ. ನೆರೆರಾಷ್ಟ್ರದೊಂದಿಗೆ ಯುದ್ಧ ಸೂಕ್ಷ್ಮವಾದ ವಿಷಯ ಅಂತ ಎಲ್ಲರಿಗೂ ಮನವರಿಕೆಯಾಗಿದೆ.

ಮೈಸೂರು, ಮೇ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶ್ವೇತವರ್ಣದ ಹೆಲಿಕಾಪ್ಟರ್ ಒಂದರಲ್ಲಿ ಜಿಲ್ಲೆಯ ಹೆಚ್ ಡಿ ಕೋಟೆಗೆ ಆಗಮಿಸಿದರು. ಕೋಟೆಯಲ್ಲಿ ಏರ್ಪಡಿಸಲಾಗಿರುವ ಡಾ ಬಿಅರ್ ಅಂಬೇಡ್ಕರ್ ಜಯಂತಿ (Dr BR Ambedkar Jayanti) ಮತ್ತು ಸಂವಿಧಾನ ಶಿಲ್ಪಿಯವರ ಪ್ರತಿಮೆ ಆವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ದರಾಮಯ್ಯ ಆಗಮಿಸಿದರು. ಪಟ್ಟಣದ ಕಾಲೇಜು ಮೈದಾನ ಆವರಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಮುಖ್ಯಮಂತ್ರಿಯವರನ್ನು ಹೊತ್ತ ಚಾಪರ್ ಲ್ಯಾಂಡ್ ಆದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ, ಕೆ ವೆಂಕಟೇಶ್, ಶಾಸಕರಾದ ಅನಿಲ್ ಮಾದು, ಡಿ ರವಿನಶಂಕರ್ ಮೊದಲಾದವರು ಸ್ವಾಗತಿಸಲು ಧಾವಿಸುವುದನ್ನು ನೋಡಬಹುದು.

ಇದನ್ನು ಓದಿ:    ಆಪರೇಷನ್ ಸಿಂಧೂರ್: ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ