ಮುದ್ದೇಬಿಹಾಳದಲ್ಲಿ ತಲೆ ಮೇಲೆ ಬೆಳ್ಳಿ ಕಿರೀಟವಿಟ್ಟಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖದಲ್ಲಿ ಲಕಲಕ ಹೊಳಪು!

|

Updated on: Feb 02, 2024 | 4:20 PM

ಮುದ್ದೇಬಿಹಾಳ ಪಟ್ಟಣದ ಅಭಿವೃದ್ಧಿಗಾಗಿ 126 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಬೊಕ್ಕಸದಲ್ಲಿದ್ದ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಸುರಿದು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪ ಮಾಡುತ್ತಾರೆ, ಹಾಗಾದರೆ ಈ ಹಣ ಬಂದಿದೆಲ್ಲಿಂದ ಅವರು ಹೇಳ್ತಾರಾ ಎಂದು ಸಿದ್ದರಾಮಯ್ಯ ಕುಹಕವಾಡಿದರು.

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ತಲೆಯ ಮೇಲೆ ಬೆಳ್ಳಿಕಿರೀಟ ಇಟ್ಟು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil), ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivanand Patil) ಮತ್ತು ಬೇರೆ ಕೆಲ ಕಾಂಗ್ರೆಸ್ ಮುಖಂಡರನ್ನು ನೋಡಬಹುದು. ಕಿರೀಟದೊಂದಿಗೆ ಭಾರಿ ಗಾತ್ರದ ಹಾರವೊಂದನ್ನು ಸಿದ್ದರಾಮಯ್ಯನವರಿಗೆ ಹಾಕಿದಾಗ ಪಾಟೀಲ್ ಮತ್ತು ಕಾರ್ಯಕರ್ತರು ಸಹ ಅದರೊಳಗೆ ಸೇರಿಕೊಂಡರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಮಾತಾಡಿದ ಸಿದ್ದರಾಮಯ್ಯ, ಮುದ್ದೇಬಿಹಾಳ ಪಟ್ಟಣದ ಅಭಿವೃದ್ಧಿಗಾಗಿ 126 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಬೊಕ್ಕಸದಲ್ಲಿದ್ದ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಸುರಿದು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪ ಮಾಡುತ್ತಾರೆ, ಹಾಗಾದರೆ ಈ ಹಣ ಬಂದಿದೆಲ್ಲಿಂದ ಅವರು ಹೇಳ್ತಾರಾ ಎಂದು ಕುಹಕವಾಡಿದರು. ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on