ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ: ಸತೀಶ್ ಜಾರಕಿಹೊಳಿ
ಬರ ಪರಿಹಾರ ನಿಧಿಗಾಗಿ ಕರ್ನಾಟಕ ಮನವಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಬಿಡುಗಡೆಯಾಗಿಲ್ಲ. ಮಳೆಗಾಲದಲ್ಲಿ ಪ್ರವಾಹದಂಥ ಸ್ಥಿತಿ ಕರ್ನಾಟಕದಲ್ಲಿ ತಲೆದೋರಿದಾಗಲೂ ಪರಿಹಾರಕ್ಕಾಗಿ ಕೇಂದ್ರದಿಂದ ಹಣ ಬಿಡುಗಡೆಯಾಗಿರಲಿಲ್ಲ ಎಂದು ಹೇಳಿದ ಸಚಿವ, ಎಲ್ಲ ಅಂಶಗಳ ಆಧಾರವಾಗಿಟ್ಟುಕೊಂಡೇ ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಯಾವತ್ತೂ ಆವೇಶದಲ್ಲಿ ಮಾತಾಡಲ್ಲ ಮತ್ತು ಗಂಭೀರವಾದ ಪ್ರಶ್ನೆ ಕೇಳಿದಾಗಲೂ ನಿರುದ್ವಿಗ್ನತೆಯಿಂದ ಉತ್ತರಿಸುತ್ತಾರೆ. ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಡಿಕೆ ಸುರೇಶ್ (DK Suresh) ಅನ್ನುತ್ತಿದ್ದಂತೆಯೇ ನಗುತ್ತಾ ದಕ್ಷಿಣ ಭಾರತವಾ (South India)? ಅಂತ ಪ್ರತಿಕ್ರಿಯಿಸಿದರು. ನಂತರ ಮಾತಾಡಿದ ಸಚಿವ, ವಿಷಯವನ್ನು ಅರ್ಥಮಾಡಿಕೊಳ್ಳಬೇಕಿದೆ. ಅನುದಾನ ಹಂಚಿಕೆಯ ವಿಷಯದಲ್ಲಿ ಬಹಳಷ್ಟು ಏರುಪೇರಾಗುತ್ತಿದೆ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಜವಾಬ್ದಾರಿಯಾಗಿದೆ, ಎಲ್ಲ ರಾಜ್ಯಗಳನ್ನು ಅವರು ಸಮಾನ ದೃಷ್ಟಿಯಿಂದ ನೋಡಬೇಕು ಎಂದರು. ಬರ ಪರಿಹಾರ ನಿಧಿಗಾಗಿ ಕರ್ನಾಟಕ ಮನವಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಬಿಡುಗಡೆಯಾಗಿಲ್ಲ. ಮಳೆಗಾಲದಲ್ಲಿ ಪ್ರವಾಹದಂಥ ಸ್ಥಿತಿ ಕರ್ನಾಟಕದಲ್ಲಿ ತಲೆದೋರಿದಾಗಲೂ ಪರಿಹಾರಕ್ಕಾಗಿ ಕೇಂದ್ರದಿಂದ ಹಣ ಬಿಡುಗಡೆಯಾಗಿರಲಿಲ್ಲ ಎಂದು ಹೇಳಿದ ಸಚಿವ, ಎಲ್ಲ ಅಂಶಗಳ ಆಧಾರವಾಗಿಟ್ಟುಕೊಂಡೇ ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ, ಮುಂಬರುವ ವರ್ಷಗಳಲ್ಲಿ ಅಂಥದೊಂದು ಕೂಗು ಕೇಳಿ ಬರಬರಬಹುದು ಅನ್ನೋದು ಅವರ ಮಾತಿನ ತಾತ್ಪರ್ಯ ಆಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ