ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೋಸ್ಕರ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಲಕ್ಷಣ ಕಾಣಿಸುತ್ತಿದೆ: ಮುಖ್ಯಮಂತ್ರಿ ಚಂದ್ರು

|

Updated on: Sep 29, 2023 | 6:18 PM

ನಿವೃತ್ತ ನ್ಯಾಯಾಧೀಶರ ಜೊತೆ ಸಭೆ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಸಂಗತಿಗಳನ್ನು ಚರ್ಚಿಸಿರೋದು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಅವರು ಹೇಳಿದರು. ಪ್ರಾಧಿಕಾರದ ಆದೇಶದಂತೆ ನೀರರು ಬಿಡದೆ ಹೋದರೆ ಏನಾಗುತ್ತದೆ ಎಂಬ ಸಂಗತಿಯನ್ನೂ ಅವರು ಚರ್ಚಿಸಿದ್ದಾರೆ ಎಂದು ಚಂದ್ರು ಹೇಳಿದರು.

ಬೆಂಗಳೂರು: ಸೋಮವಾರದಂದು ವಾರದ ಮೊದಲ ಬಂದ್ (ಬೆಂಗಳೂರು ಬಂದ್) ಕರೆದಿದ್ದ ಕನ್ನಡ ಪರ ಹೋರಾಟಗಾರ ಮುಖ್ಯಮಂತ್ರಿ ಚಂದ್ರು ಮತ್ತು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರೊಡನೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸಭೆಯ ನಡೆದ ಮಾತುಕತೆಯ ಬಗ್ಗೆ ಹೇಳೋದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ರೈತರ ಪರವಾಗಿ ಒಂದು ಕಠಿಣ ನಿರ್ಧಾರ ತೆಗೆದದುಕೊಳ್ಳುವ ಲಕ್ಷಣ ಕಾಣಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ನಿವೃತ್ತ ನ್ಯಾಯಾಧೀಶರ ಜೊತೆ ಸಭೆ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಸಂಗತಿಗಳನ್ನು ಚರ್ಚಿಸಿರೋದು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಅವರು ಹೇಳಿದರು. ಪ್ರಾಧಿಕಾರದ ಆದೇಶದಂತೆ ನೀರರು ಬಿಡದೆ ಹೋದರೆ ಏನಾಗುತ್ತದೆ ಎಂಬ ಸಂಗತಿಯನ್ನೂ ಅವರು ಚರ್ಚಿಸಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಏನೇ ಬರಲಿ 150 ಸಂಘಟನೆಗಳು ಜೊತೆಗಿದ್ದೇವೆ, ಎಲ್ಲರೂ ಒಂದೆಡೆ ಕೂತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತೇವೆ, ತಮ್ಮ ಹೋರಾಟ ನಿಲ್ಲೋದಿಲ್ಲ, ಜಾರಿಯಲ್ಲಿರುತ್ತದೆ ಎಂದದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on