Bangalore Bandh; ತಮಿಳುನಾಡುಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು-ನಮ್ಮ ಮೊದಲ ಬೇಡಿಕೆ: ಮುಖ್ಯಮಂತ್ರಿ ಚಂದ್ರು
ಅಸಲಿಗೆ ಹೋರಾಟಗಳ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗಿತ್ತು ಅದರೆ ಇವತ್ತಿನ ಬೆಂಗಳೂರು ಬಂದ್ ದೇಶವನ್ನು ಬೆಚ್ಟಿ ಬೀಳಿಸುವಂತೆ ಮಾಡಿದೆ ಅಂತ ಅವರು ಹೇಳಿದರು. ಸೆಕ್ಷನ್ 144 ಉಲ್ಲಂಘನೆ ಮಾಡಿದರೆ ಏನೂ ಅಗಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮಾಡಿದಾಗ ಹೇಳಿದ್ದೆ ಎಂದು ಚಂದ್ರು ಹೇಳಿದರು.
ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಕನ್ನಡ ಪರ ಹೋರಾಟಗಾರ ಮುಖ್ಯಮಂತ್ರಿ ಚಂದ್ರು (Mukhya Manti Chandru) ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿರುವ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರ ನೇತೃತ್ವದಲ್ಲಿ ನಡೆದ ಬೆಂಗಳೂರು ಬಂದ್ (Bengaluru Bandh) ಭಾರೀ ಯಶ ಕಂಡಿದೆ. ನಗರದಲ್ಲಿಂದು ಟಿವಿ9 ಕನ್ನಡ ವರದಿಗಾರ, ಚಂದ್ರು ಅವರನ್ನು ಮಾತಾಡಿಸಿ ಬಂದ್ ಯಶ ಕಂಡಿರುವ ಹಿನ್ನೆಲೆಯಲ್ಲಿ ಅಭಿನಂದಿಸಿದಾಗ; ಕಾವೇರಿ ನದಿಯಲ್ಲಿ ನೀರಿಲ್ಲದಿದ್ದರೂ ನೀರು ಬಿಡಿ ಅನ್ನುವ ಆದೇಶ, ಅದನ್ನು ಒಪ್ಪಿಕೊಂಡು ಇಕ್ಕಟ್ಟಿಗೆ ಸಿಕ್ಕುವ ಸರ್ಕಾರದ ವಿರುದ್ಧ ಜನರಲ್ಲಿ ಹುಟ್ಟಿದ ದ್ವೇಷದ ಕಾರಣ ಇಂದಿನ ಪ್ರತಿಭಟನೆ ಸಫಲವಾಗಿದೆ ಎಂದು ಹೇಳಿದರು. ಅಸಲಿಗೆ ಜನರಿಗೆ ಹೋರಾಟಗಳ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗಿತ್ತು ಅದರೆ ಇವತ್ತಿನ ಬೆಂಗಳೂರು ಬಂದ್ ದೇಶವನ್ನು ಬೆಚ್ಟಿ ಬೀಳಿಸುವಂತೆ ಮಾಡಿದೆ ಅಂತ ಅವರು ಹೇಳಿದರು. ಸೆಕ್ಷನ್ 144 ಉಲ್ಲಂಘನೆ ಮಾಡಿದರೆ ಏನೂ ಅಗಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮಾಡಿದಾಗ ಹೇಳಿದ್ದೆ ಎಂದು ಚಂದ್ರು ಹೇಳಿದರು.
ಸರ್ಕಾರ ಪ್ರತಿನಿಧಿಯಾಗಿ ಮನವಿ ಪತ್ರ ಸ್ವೀಕರಿಸಲು ಬಂದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದಿಟ್ಟ ಬೇಡಿಕೆಗಳೇನು ಎಂದು ಕೇಳಿದ ಪ್ರಶ್ನೆಗೆ, ತಮಿಳುನಾಡುಗೆ ನೀರು ಬಿಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು, ವಿಧಾನ ಸಭೆಯ ವಿಶೇಷ ಅಧಿವೇಶನ ಕರೆದು ವಿಷಯವನ್ನು ಚರ್ಚಿಸಬೇಕು, ಸಂಕಷ್ಟ ಸೂತ್ರ ಜಾರಿಗೊಳಿಸದ ಹೊರತು ನೀರು ಬಿಡುವುದಿಲ್ಲ ಅಂತ ಪ್ರಾಧಿಕಾರಕ್ಕೆ ಹೇಳಬೇಕು ಮತ್ತು ಅವೈಜ್ಞಾನಿಕ ಸೂಚನೆಗಳನ್ನು ಜಾರಿಗೊಳಿಸುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು (CWMA) ರದ್ದು ಮಾಡಿ ಹೊಸ ಪ್ರಾಧಿಕಾರ ರಚಿಸುವಂತೆ ಸುಪ್ರೀಮ್ ಕೋರ್ಟ್ ಗೆ ಮನವಿ ಮಾಡಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ