Bangalore Bandh; ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಅಭಿನಂದನೆಗಳು, ಸರ್ಕಾರ ಅವರಿಗೆ ಅಡ್ಡಿಪಡಿಸಿಲ್ಲ: ಡಿಕೆ ಶಿವಕುಮಾರ್

Bangalore Bandh; ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಅಭಿನಂದನೆಗಳು, ಸರ್ಕಾರ ಅವರಿಗೆ ಅಡ್ಡಿಪಡಿಸಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 26, 2023 | 2:45 PM

ದೆಹಲಿಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸುತ್ತಿದೆ ಮತ್ತು ರಾಜ್ಯದ ಅಧಿಕಾರಿಗಳು ವಸ್ತುಸ್ಥಿತಿಯನ್ನು ಸಮಿತಿಗೆ ತಿಳಿಸುತ್ತಿದ್ದಾರೆ. ಸಂತಸದ ಸಂಗತಿಯೆಂದರೆ, ಎರಡು ದಿನಗಳಿಂದ ಮಳೆಯಾಗುತ್ತಿದ್ದು ಸುಮಾರು 10,000 ಕ್ಯೂಸೆಕ್ಸ್ ನಷ್ಟು ನೀರು ಕೆಆರ್ ಜಲಾಶಯಕ್ಕೆ ಹರಿದು ಬಂದಿದೆ, ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ರೈತ ಮತ್ತು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಗೆ (Bangalore Bandh) ಕರೆ ನೀಡಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಮುಷ್ಕರವನ್ನು ಶಾಂತಿಯುತವಾಗಿ ನಡೆಸುತ್ತಿರವುದಕ್ಕೆ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಪ್ರತಿಭಟನೆ ನಡೆಸಲು ಸರ್ಕಾರ ಅವರಿಗೆ ಅಡ್ಡಿ ಮಾಡಿಲ್ಲ ಎಂದ ಶಿವಕುಮಾರ್, ಪ್ರತಿಭಟನೆಕಾರರು ಸಹ ಯಾರಿಗೂ ತೊಂದರೆಯಾಗದ ಹಾಗೆ ಬಂದ್ ಆಚರಿಸಿದ್ದು ಶ್ಲಾಘನೀಯ ಎಂದು ಹೇಳಿದರು. ದೆಹಲಿಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulatory Committee) ಸಭೆ ನಡೆಸುತ್ತಿದೆ ಮತ್ತು ರಾಜ್ಯದ ಅಧಿಕಾರಿಗಳು ವಸ್ತುಸ್ಥಿತಿಯನ್ನು ಸಮಿತಿಗೆ ತಿಳಿಸುತ್ತಿದ್ದಾರೆ. ಸಂತಸದ ಸಂಗತಿಯೆಂದರೆ, ಎರಡು ದಿನಗಳಿಂದ ಮಳೆಯಾಗುತ್ತಿದ್ದು ಸುಮಾರು 10,000 ಕ್ಯೂಸೆಕ್ಸ್ ನಷ್ಟು ನೀರು ಕೆಆರ್ ಜಲಾಶಯಕ್ಕೆ ಹರಿದು ಬಂದಿದೆ, ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಿವಕುಮಾರ್ ಹೇಳಿದರು. ರಾಜ್ಯದ ಹಿತಾಸಕ್ತಿ ಕಾಪಾಡಲು ತಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ