ಸಾಹಿತ್ಯ ಬೇರೆ, ಸ್ನೇಹ ಬೇರೆ: ಭೈರಪ್ಪ ಬಲಪಂಥೀಯ ಬರಹಗಳ ಬಗ್ಗೆ ಸಿದ್ದರಾಮಯ್ಯ ಅಚ್ಚರಿಯ ಮಾತು!
ಕನ್ನಡ ಸಾಹಿತ್ಯದ ದಿಗ್ಗಜ ಎಸ್.ಎಲ್. ಬೈರಪ್ಪನವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದಾರೆ. ಅವರ ದೃಷ್ಟಿಕೋನ ಮತ್ತು ತಮ್ಮದೇ ದೃಷ್ಟಿಕೋನ ಒಂದೇ ಆಗಿರಬೇಕೆಂದು ಇಲ್ಲ. ಹಾಗೆಂದು ಸಾಹಿತ್ಯ ಬೇರೆ, ಸ್ನೇಹವೇ ಬೇರೆ ಎಂದು ಸಿಎಂ ಹೇಳಿದ್ದಾರೆ. ಬೈರಪ್ಪನವರು ಪಡೆದ ಅನೇಕ ಪ್ರಶಸ್ತಿಗಳನ್ನು ಸ್ಮರಿಸುತ್ತಾ, ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯದಿರುವುದು ಅವರಿಗೆ ನೋವಾಗಿರಬಹುದು ಎಂದೂ ಅವರು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 25: ‘ಸಾಹಿತ್ಯ ಬೇರೆ, ಸ್ನೇಹ ಬೇರೆ. ನಮ್ಮ ದೃಷ್ಟಿಕೋನಗಳು ಬೇರೆ ಬೇರೆ. ಹಾಗೆಂದು ಅವರ ದೃಷ್ಟಿಕೋನ, ನನ್ನ ದೃಷ್ಟಿಕೋನ ಒಂದೇ ಆಗಿರಬೇಕು ಎಂದೇನಿಲ್ಲ. ಅವರ ಅಭಿಮಾನಿ ಆಗಬೇಕು ಎಂದೇನೂ ಇಲ್ಲ, ಆಗಬಾರದೂ ಎಂದಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ, ಬೈರಪ್ಪನವರ ಸಾಹಿತ್ಯಿಕ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ. ಬೈರಪ್ಪನವರು ಪಡೆದ ಪದ್ಮಭೂಷಣ, ಸರಸ್ವತಿ ಸಮ್ಮಾನ, ನಾಡೋಜ, ರಾಜ್ಯೋತ್ಸವ ಮತ್ತು ಪಂಪ ಪ್ರಶಸ್ತಿಗಳನ್ನು ಸ್ಮರಿಸಿ, ಜ್ಞಾನಪೀಠ ಪ್ರಶಸ್ತಿಯೂ ಅವರಿಗೆ ದೊರೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಪ್ರಶಸ್ತಿಯನ್ನು ಬಯಸದೇ ಇರಬಹುದು, ಆದರೆ ಅವರಿಹಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು. ಅವರ ಅಂತ್ಯಕ್ರಿಯೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದು, ರಾಜ್ಯ ಸರ್ಕಾರದಿಂದ ಸರ್ಕಾರಿ ಗೌರವ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
