ಆತ್ಮೀಯ ಸ್ನೇಹಿತ, ಮಾಜಿ ಶಾಸಕ ಜಯಣ್ಣರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಆತ್ಮೀಯ ಸ್ನೇಹಿತ, ಮಾಜಿ ಶಾಸಕ ಜಯಣ್ಣರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2024 | 2:29 PM

ಕೊನೆವರೆಗೂ ಅವಿವಾಹಿತರಾಗೇ ಉಳಿದ 72-ವರ್ಷ ವಯಸ್ಸಿನ ಜಯಣ್ಣ ವಾಸಕ್ಕೆಂದು ಹೊಸಮನೆ ಕಟ್ಟಿಸಿದ್ದರು ಮತ್ತು ಗೃಹಪ್ರವೇಶ ಸಮಾರಂಭವನ್ನು ಡಿಸೆಂಬರ್ 12 ಅಂದರೆ ನಾಳೆ ನಡೆಸುವ ಯೋಜನೆ ಮಾಡಿಕೊಂಡಿದ್ದರು. ನಾಳೆ ಗೃಹಪ್ರವೇಶ ಅಂದರೆ ಇವತ್ತು ಅಸು ನೀಗಿದ್ದಾರೆ. ಅವರ ನೂತನ ಮನೆಯ ನಾಮಫಲಕವನ್ನು ಸಿದ್ದರಾಮಯ್ಯ ಕಳೆದ ಶನಿವಾರವಷ್ಟೇ ಅನಾವರಣ ಮಾಡಿದ್ದರು.

ಚಾಮರಾಜನಗರ: ಮಂಗಳವಾರ ಮಧ್ಯರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಕೊಳ್ಳೇಗಾಲದ ಮಾಜಿ ಶಾಸಕ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಳ್ಳೇಗಾಲಕ್ಕೆ ಆಗಮಿಸಿದರು. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಜಯಣ್ಣ ಮುಖ್ಯಮಂತ್ರಿಯವರಿಗೆ ಪರಮಾಪ್ತರಾಗಿದ್ದರು. ಮೊದಲಿಗೆ ಅವರಿಬ್ಬರೂ ಜೆಡಿಎಸ್ ನಲ್ಲಿದ್ದರು ಮತ್ತು ಜಯಣ್ಣ 2013 ರಲ್ಲಿ ಕಾಂಗ್ರೆಸ್ ಟಿಕೆಟ್​ನಿಂದ ಸ್ಪರ್ಧಿಸಿ ಕೊಳ್ಳೇಗಾಲದ ಶಾಸಕರಾಗಿದ್ದರು. ಅವರ ಪಾರ್ಥೀವ ಶರೀರದ ಮುಂದೆ ಸಿದ್ದರಾಮಯ್ಯ ಭಾವುಕರಾಗಿದ್ದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಸ್​ಎಂ ಕೃಷ್ಣ ನಿಧನ: ತವರೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ, ಸಿಎಂ ಸಿದ್ದರಾಮಯ್ಯ ಭಾಗಿ