ಹೈಕಮಾಂಡ್ ತೀರ್ಮಾನ ಮಾಡಿದ್ರೆ! ಸಿಎಂ ಸಿದ್ದರಾಮಯ್ಯ ದಿಢೀರ್ ಮಾತಿನ ವರಸೆ ಬದಲಿಸಿದ್ದೇಕೆ?
ಬೆಂಗಳೂರಿನಲ್ಲಿ ಹುಟ್ಟಿಕೊಂಡ ಕಾಂಗ್ರೆಸ್ ಕ್ರಾಂತಿಯ ಚೆಂಡು ಇದೀಗ ದೆಹಲಿಯ ಅಂಗಳಕ್ಕೆ ಹಾರುವುದು ಬಹುತೇಕ ಖಚಿತವಾಗಿದೆ. ನವೆಂಬರ್ ಎರಡನೇ ವಾರಕ್ಕೆ ಕ್ರಾಂತಿಯ ಕಿಡಿಗಳೆಲ್ಲ ದೆಹಲಿಯಲ್ಲಿ ಸಿಡಿಯಲಿವೆ. ಒಂದೊಂದು ದಿನಾಂಕ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಲಿಗೆ ಮಹತ್ವದ ಕ್ಷಣಗಳಾಗಿ ಮಾರ್ಪಾಡಾಗಿವೆ.
ಬೆಂಗಳೂರು, ಅಕ್ಟೋಬರ್ 28: ಐದು ವರ್ಷ ನಾನೇ ಸಿಎಂ ಆಗಿರ್ತೀನಿ, ಇದು ಸಿಎಂ ಸಿದ್ದರಾಮಯ್ಯ 2023 ರ ನವೆಂಬರ್ 2 ರಂದು ನೀಡಿದ್ದ ಹೇಳಿಕೆ. 2025 ರ ಜುಲೈ 7 ರಂದು ಸಹ ‘5 ವರ್ಷ ನಾನೇ ಸಿಎಂ, ನಿಂಗ್ಯಾಕೆ ಅನುಮಾನ’ ಎಂದಿದ್ದರು. ಅಕ್ಟೋಬರ್ 1 ರಂದು ಮತ್ತೆ, ಉಳಿದ ಎರಡೂವರೆ ವರ್ಷ ನಾನೇ ಸಿಎಂ ಎಂದಿದ್ದರು. ಆದರೆ ಈಗ ದಿಢೀರ್ ಆಗಿ ವರಸೆ ಬದಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು, ‘5 ವರ್ಷ ನೀವೇ ಸಿಎಂ ಆಗಿರುತ್ತೀರಾ’ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸಿದ್ದರಾಮಯ್ಯ, ‘ಹೈಕಮಾಂಡ್ ತೀರ್ಮಾನ ಮಾಡಿದರೆ’ ಎಂದಿದ್ದಾರೆ.
Published on: Oct 28, 2025 08:09 AM
