ಸುದ್ದಿಗೋಷ್ಠಿಯಲ್ಲಿ ಸಂವಿಧಾನದ ಆಯ್ದಭಾಗವನ್ನು ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Jan 08, 2025 | 10:24 PM

ಶಾಸಕ ಸುನೀಲ ಕುಮಾರ ಹೇಳಿದ್ದನ್ನು ಪತ್ರಕರ್ತರೊಬ್ಬರು ಉಲ್ಲೇಖಿಸಿದಾಗ ನೀನು ಏನಯ್ಯ ಯಾವಾಗಲೂ ಬಿಜೆಪಿಯವರ ಪ್ರಶ್ನೆಗಳನ್ನೇ ಕೇಳುತ್ತೀಯಲ್ಲ ಎಂದು ಗೇಲಿ ಮಾಡಿದ ಸಿದ್ದರಾಮಯ್ಯ, ಹಿಂದೆ ಶರಣಾಗಿದ್ದ ನಕ್ಸಲರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲವಾದರೆ ತಮ್ಮ ಸರ್ಕಾರ ಈಡೇರಿಸುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಜಿ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು.

ಬೆಂಗಳೂರು: ನಕ್ಸಲರು ಶರಣಾದ ಬಳಿಕ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಫಾಸ್ಟ್​ ಟ್ರ್ಯಾಕ್ ಕೋರ್ಟ್​ಗಳನ್ನು ನಿರ್ಮಿಸಿ ಅವರಿಗೆ ತ್ವರಿತ ನ್ಯಾಯ ಒದಗಿಸುವ ಯೋಚನೆ ಸರ್ಕಾರಕ್ಕಿದೆ ಎಂದು ಹೇಳಿದರು. ನಕ್ಸಲರ ಶರಣಾಗತಿಯ ಬಗ್ಗೆ ಬಿಜೆಪಿ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಅವರು ಸಂವಿಧಾನ ಓದಿದಂತಿಲ್ಲ ಅಂತ ಹೇಳಿ ಸಂವಿಧಾನದಲ್ಲಿ ಡಾ ಬಿಅರ್ ಅಂಬೇಡ್ಕರ್ ಬರೆದಿರುವ ವಿಷಯವನ್ನು ಓದಿದರು. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಕೇವಲ ಸಂವೈಧಾನಿಕ ಮಾರ್ಗಗಳನ್ನು ಮಾತ್ರ ಅನುಸರಿಸಬೇಕು, ಸಂವಿಧಾನ ಇಲ್ಲದ ಸಮಯದಲ್ಲಿ ಅಸಂವೈಧಾನಿಕ ಮಾರ್ಗಗಳನ್ನು ಅನುಸರಿಸಿದ್ದರೆ ಅದಕ್ಕೆ ಸಮರ್ಥನೆ ಇತ್ತೇನೋ? ಆದರೆ ಸಂವೈಧಾನಿಕ ವಿಧಾನಗಳು ನಮಗೆ ಲಭ್ಯವಿರುವುದರಿಂದ ಅಸಂವೈಧಾನಿಕ ವಿಧಾನಗಳಿಗೆ ಸಮರ್ಥನೆ ಇಲ್ಲ ಎಂದು ಸಿದ್ದರಾಮಯ್ಯ ಓದಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ