ಕಂಠೀರವ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳಿಂದ ಸಿದ್ದರಾಮಯ್ಯಗೆ ಸಿಕ್ಕ ಕರತಾಡನ ಆಶ್ಚರ್ಯ ಮೂಡಿಸುತ್ತದೆ!

ಕಂಠೀರವ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳಿಂದ ಸಿದ್ದರಾಮಯ್ಯಗೆ ಸಿಕ್ಕ ಕರತಾಡನ ಆಶ್ಚರ್ಯ ಮೂಡಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2024 | 2:22 PM

ಸಿದ್ದರಾಮಯ್ಯರನ್ನು ರಾಜ್ಯದಲ್ಲಿ ಮಾಸ್ ಲೀಡರ್ ಎಂದು ಕರೆಯುತ್ತಾರೆ. ಅವರು ಹೋದೆಡೆಯೆಲ್ಲ ಜನ ಭಾರೀ ಸಂಖ್ಯೆಯಲ್ಲಿ ಸೇರುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿಯೆಂದರೆ, ಇಂದು ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಅವರನ್ನು ಸ್ವಾಗತಿಸಿದ ರೀತಿ ಆಶ್ಚರ್ಯ ಹುಟ್ಡಿಸಿತು. ವಿದ್ಯಾರ್ಥಿಗಳ ನಡುವೆಯೂ ಅವರು ಸಾಕಷ್ಟು ಜನಪ್ರಿಯರು ಅನ್ನೋದು ಸುಳ್ಳಲ್ಲ.

ಬೆಂಗಳೂರು: ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಪರಿಸರ ನಡಿಗೆ ಮತ್ತು ವನಮಹೋತ್ಸವ-2024 ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಭೂ ಪುನಶ್ಚೇತನ, ಬರ ನಿರ್ವಹಣೆ ಮತ್ತು ಬರಡುಭೂಮಿ ಚೇತರಿಕೆ ಘೋಷ ವಾಕ್ಯದಡಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲೂ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಅವರೊಂದಿಗೆ ಪಾಲ್ಗೊಡರು. ಕ್ರೀಡಾಂಗಣದಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯಮಂತ್ರಿ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಕಾರ್ಯಕ್ರಮದ ನಿರೂಪಕರ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಾರೆ ಎಂದು ಘೋಷಿಸಿದ ಕೂಡಲೇ ವಿದ್ಯಾರ್ಥಿಗಳು ಹೋಯ್ ಎಂದು ಅರಚುತ್ತಾ ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸುತ್ತಾರೆ. ವೇದಿಕೆಯನ್ನು ಹತ್ತುವ ಮೊದಲು ಸಿದ್ದರಾಮಯ್ಯ ಕ್ರೀಡಾಂಗಣದಲ್ಲಿ ನೆಟ್ಟ ನೂರಾರು ಸಸಿಗಳಿಗೆ ನೀರುಣ್ಣಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ವಿಧಾನಸಭೆಯಲ್ಲಿ ಮೆಜಾರಿಟಿ ಇರೋ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ, ವಿ ಪ ಸದಸ್ಯ