ಜೈಲಲ್ಲಿರುವ ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಬಂದ ತಂದೆ-ತಾಯಿ ಮತ್ತು ಸಹೋದರ!

ಜೈಲಲ್ಲಿರುವ ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಬಂದ ತಂದೆ-ತಾಯಿ ಮತ್ತು ಸಹೋದರ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2024 | 3:13 PM

ಪವಿತ್ರಾ ಗೌಡ ಸಹೋದರ ಇವತ್ತು ಸಹ ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಯಾವುದೇ ಕಾಮೆಂಟ್ ಮಾಡದೆ ಜೈಲು ಆವರಣದೊಳಗೆ ನಡೆದುಹೋದರು. ನಿಮಗೆ ನೆನಪಿರಬಹುದು. ಮೊದಲ ಸಲ ಬಂದಾಗ ಕೆಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಮಾಧ್ಯಮದವರನ್ನು ದುರುಗುಟ್ಟಿ ನೋಡುತ್ತ ಬೇರೆ ಕೆಲಸ ಇಲ್ವಾ ನಿಮಗೆ ಅಂತ ಕೇಳಿದ್ದರು.

ಆನೇಕಲ್ (ಬೆಂಗಳೂರು): ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳನ್ನು, ವಿಚಾರಣಾಧೀನ ಕೈದಿಗಳನ್ನು, ನ್ಯಾಯಾಂಗ ಕಸ್ಟಡಿಯಲ್ಲಿರುವವರನ್ನು ಕಂಡು ಮಾತಾಡಿಸಲು ಪ್ರತಿನಿತ್ಯ ಅವರ ಬಂಧುಗಳು, ಸ್ನೇಹಿತರು ಬರುತ್ತಿರುತ್ತಾರೆ. ಆದರೆ, ಸೆಲಿಬ್ರಿಟಿ ಕೈದಿಗಳನ್ನು ನೋಡಲು ಬಂದವರ ಬಗ್ಗೆ ಮಾತ್ರ ಸುದ್ದಿಯಾಗುತ್ತದೆ. ನಿನ್ನೆ ನಾವು ವರದಿ ಮಾಡಿದ ಹಾಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ರನ್ನು ನೋಡಲು ಅವರಂತೆಯೇ ಅದೇ ಪ್ರಕರಣದಲ್ಲಿ ಜೈಲ್ಲಲ್ಲಿರುವ ಪವಿತ್ರಾ ಗೌಡರ ಆಪ್ತ ಸ್ನೇಹಿತೆ ಸಮತಾ ಬಂದಿದ್ದರು. ಇಂದು ಪವಿತ್ರಾ ಗೌಡರನ್ನು ನೋಡಲು ಮಾತಾಡಿಸಲು ಅವರ ತಂದೆ-ತಾಯಿ ಮತ್ತು ಸಹೋದರ ಬಂದಿದ್ದರು. ಪವಿತ್ರಾ ತಂದೆ ಕೈಯಲ್ಲಿ ಒಂದು ಭಾರವಾದ ಬ್ಯಾಗನ್ನು ಹಿಡಿದುಕೊಂಡು ಜೈಲು ಅವರಣಲ್ಲಿ ಮುಂದೆ ಮುಂದೆ ನಡೆದು ಹೋಗುತ್ತಿದ್ದರೆ ಅವರ ತಾಯಿ ಪತಿಯನ್ನು ಹಿಂಬಾಲಿಸುತ್ತಿದ್ದರು. ಬ್ಯಾಗಲ್ಲಿ ಅವರು ಪವಿತ್ರಾಗಾಗಿ ಊಟ ಮತ್ತು ಅಗತ್ಯ ವಸ್ತುಗಳನ್ನು ತಂದಿರಬಹುದು. ಅವರು ಜೈಲಿರುವ ಭಾಗಕ್ಕೆ ನಡೆದು ಹೋದ ಕೆಲ ನಿಮಿಷಗಳ ನಂತರ ಅವರ ಸಹೋದರ ಸಹ ಒಳಗಡೆಗೆ ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಸಹ ಒಪ್ಪಿಗೆ ಸೂಚಿಸಿದರು!