ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಾಗಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃಕ್ಷಮಾತೆ, ಇಂದು (ನವೆಂಬರ್ 14) ಮಧ್ಯಾಹ್ನ 12ಗಂಟೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಸಾಲುಮರದ ತಿಮ್ಮಕ್ಕನ ಅಂತಿಮ ದರ್ಶನ ಪಡೆದುಕೊಂಡರು.
ಬೆಂಗಳೂರು, (ನವೆಂಬರ್ 14): ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃಕ್ಷಮಾತೆ, ಇಂದು (ನವೆಂಬರ್ 14) ಮಧ್ಯಾಹ್ನ 12ಗಂಟೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಸಾಲುಮರದ ತಿಮ್ಮಕ್ಕನ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಅವರೊಬ್ಬ ಪರಿಸರವಾದಿಯಾಗಿದ್ದರು. ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ನಡೆಯುತ್ತೆ. ಇನ್ನು ತಿಮ್ಮಕ್ಕ ಅವರು ತಮ್ಮ ಕೊನೆ ಆಸೆಯನ್ನು ಪತ್ರದ ಮೂಲಕ ತಿಳಿಸಿದ್ದು, ಅದನ್ನು ಪರಿಶೀಲಿಸಿ ಅವರ ಆಸೆ ಈಡೇರಿಸುತ್ತೇವೆ. ಬೆಂಗಳೂರಿನಲ್ಲೊಂದು ತಿಮ್ಮಕ್ಕ ವಸ್ತು ಸಂಗ್ರಾಲಯ ಮಾಡಬೇಕೆಂದು ಅವರ ಕೊನೆ ಆಸೆಯ ಪತ್ರದಲ್ಲಿ ಎಂದು ಬಹಿರಂಗಪಡಿಸಿದರು.
Published on: Nov 14, 2025 03:53 PM
