Republic Day: ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಹೊರಡಲು ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷರ ಅನುಮತಿ ಕೋರಿದರು

Republic Day: ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಹೊರಡಲು ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷರ ಅನುಮತಿ ಕೋರಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 26, 2024 | 10:40 AM

Republic Day: ರಸ್ತೆ, ಮೈದಾನ, ಅಂಗಡಿ-ಮುಂಗಟ್ಟು ಮತ್ತು ಕಚೇರಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಲ್ಲಿ ಮೊಳಗುತ್ತಿರುವ ದೇಶಭಕ್ತಿ ಗೀತೆಗಳು ಜನರಲ್ಲಿ ವಿಶಿಷ್ಟ ಅನುಭೂತಿ ಮೂಡಿಸುತ್ತಾ ಕಟ್ಟಡಗಳ ಮೇಲೆ ರಾರಾಜಿಸುತ್ತಿರುವ ರಾಷ್ಟ್ರಧ್ವಜದ ಕಡೆ ಭಕ್ತಿ-ಅಭಿಮಾನ-ಹೆಮ್ಮೆಯಿಂದ ನೋಡುವಂತೆ ಮಾಡುತ್ತಿವೆ.

ಬೆಂಗಳೂರು: ದೇಶದೆಲ್ಲೆಡೆ 75ನೇ ಗಣರಾಜ್ಯೋತ್ಸವನ್ನು (75th Republic Day) ರಾಷ್ಟ್ರಭಕ್ತಿ, ಸಡಗರ ಮತ್ತು ಸಂಭ್ರಮಗಳಿಂದ ಆಚರಿಸಲಾಗತ್ತಿದೆ. ರಸ್ತೆ, ಮೈದಾನ, ಅಂಗಡಿ-ಮುಂಗಟ್ಟು ಮತ್ತು ಕಚೇರಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಲ್ಲಿ ಮೊಳಗುತ್ತಿರುವ ದೇಶಭಕ್ತಿ ಗೀತೆಗಳು ಜನರಲ್ಲಿ ವಿಶಿಷ್ಟ ಅನುಭೂತಿ ಮೂಡಿಸುತ್ತಾ ಕಟ್ಟಡಗಳ ಮೇಲೆ ರಾರಾಜಿಸುತ್ತಿರುವ ರಾಷ್ಟ್ರಧ್ವಜದ ಕಡೆ ಭಕ್ತಿ-ಅಭಿಮಾನ-ಹೆಮ್ಮೆಯಿಂದ ನೋಡುವಂತೆ ಮಾಡುತ್ತಿವೆ. ಕರ್ನಾಟಕ ಪ್ರದೇಶ ಕಾಂಗ್ರಸ್ ಸಮಿತಿಯ ಕಚೇರಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತಿರಂಗ ಆರೋಹಣ ಮಾಡಿದರು. ಅವರ ಬಲಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಎಡಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಮಯ್ಯರನ್ನು (Siddaramaiah) ನೋಡಬಹದು. ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಹಾಡಿದ ಬಳಿಕ ಖರ್ಗೆ ಅವರು ಭಾಷಣಕ್ಕೆ ಮುಂದಾಗುವಾಗ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕಿದ್ದ ಸಿದ್ದರಾಮಯ್ಯ ಅಲ್ಲಿಂದ ಹೊರಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮತಿ ಪಡೆಯುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ