Karnataka Budget 2023; ಸಿದ್ದರಾಮಯ್ಯ ಬಜೆಟ್ ಗಮನಿಸಿದರೆ ಇದೊಂದು ರಿವರ್ಸ್ ಗೇರ್ ಸರ್ಕಾರ ಅನ್ನೋದು ಸ್ಪಷ್ಟವಾಗುತ್ತದೆ: ಬಸವರಾಜ ಬೊಮ್ಮಾಯಿ
ಮುಂಗಡ ಪತ್ರದಲ್ಲಿ ಮುಂಬರುವ ದಿನಗಳ ಬಗ್ಗೆ ಯೋಚನೆ ಇರಬೇಕು ಆದರೆ ಸಿದ್ದರಾಮಯ್ಯ ಭೂತಕಾಲಕ್ಕೆ ನಮ್ಮನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನ ಸಭೆಯಲ್ಲಿ ಮಂಡಿಸಿದ ಬಜೆಟ್ 2023 ಯಾವುದೇ ಮುಂದಾಲೋಚನೆ ಇಲ್ಲದ ಬಜೆಟ್ ಎಂದು ಮೊನ್ನೆಯಷ್ಟೇ (ಫೆಬ್ರುವರಿ) ಲೇಖಾನುದಾನವನ್ನು ಮಂಡಿಸಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬಜೆಟ್ ಮಂಡನೆಯಾದ ಬಳಿಕ ಮಾಧ್ಯಮ ಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಬೊಮ್ಮಾಯಿ, ಮುಂಗಡ ಪತ್ರದಲ್ಲಿ ಮುಂಬರುವ ದಿನಗಳ ಬಗ್ಗೆ ಯೋಚನೆ ಇರಬೇಕು ಆದರೆ ಸಿದ್ದರಾಮಯ್ಯ ಭೂತಕಾಲಕ್ಕೆ ನಮ್ಮನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲವನ್ನು 2013-2018 ರ ಅವಧಿಗೆ ಹೋಲಿಕೆ ಮಾಡಿ ನೋಡುತ್ತಾರೆ. 2008-2013 ರ ಬಿಜೆಪಿ ಸರ್ಕಾರದ ಅವಧಿಗೆ ನಾವು ಕಂಪೇರ್ ಮಾಡಿದರೆ, ತಾವು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಡಬಲ್ ಸಾಲ ಮಾಡಿದ್ದರು ಅನ್ನೋದು ಗೊತ್ತಾಗುತ್ತದೆ. ಅವರು ಮಂಡಿಸಿರುವ ಬಜೆಟ್ ನೋಡುತ್ತಿದ್ದರೆ ಇದೊಂದು ರಿವರ್ಸ್ ಗೇರ್ ಸರ್ಕಾರ (reverse gear government) ಅನ್ನೋದು ಸ್ಪಷ್ಟವಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ