ಮಂಡ್ಯದಲ್ಲಿ ರೈತಮಹಿಳೆ ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ!

Updated on: May 08, 2025 | 3:35 PM

ಕಾವೇರಿ ಅರತಿ ಕಾರ್ಯಕ್ರಮ ಈ ಬಾರಿಯ ದಸರಾ ಮಹೋತ್ಸವದೊಂದಿಗೆ ನಡೆಸಬೇಕೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ಸುಕರಾಗಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಸಮಿತಿಯ ರಚನೆಯಾಗಿದೆ ಮತ್ತು ಅಧಿಕಾರಿಗಳೊಂದಿಗೆ ಅವರು ಸಭೆಗಳನ್ನೂ ನಡೆಸಿದ್ದಾರೆ. ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಎನ್ ಚಲುವರಾಯಸ್ವಾಮಿ ಇವತ್ತು ಮುಖ್ಯಮಂತ್ರಿಯವರೊಂದಿಗಿದ್ದರು.

ಮಂಡ್ಯ, ಮೇ 8: ಮಂಡ್ಯದಲ್ಲಿರುವ ಮೈಶುಗರ್ ಫ್ಯಾಕ್ಟರಿಗೆ ಅಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಾಪಸ್ಸು ಹೋಗುವಾಗ ಕೆಆರ್​ಎಸ್, ಕಾವೇರಿ ನದಿ ನೀರು ಮತ್ತು ಸರ್ಕಾರದ ಬಹುಕೋಟಿ ಯೋಜನೆಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ರೈತ ಮಹಿಳೆಯರ ಅಕ್ರೋಶ ಎದುರಿಸಬೇಕಾಯಿತು. ಒಬ್ಬ ರೈತ ಮಹಿಳೆ, ಡಿಸ್ನಿ ಲ್ಯಾಂಡ್ ನಂಥ ಯೋಜನೆ ಮಂಡ್ಯದ ಜನತೆಗೆ ಅವಶ್ಯಕತೆ ಇಲ್ಲ, ಅಂಥ ವೈಭವೀಕೃತ ಯೋಜನೆಗಳು ಬೇಕಿಲ್ಲ ಎಂದರು. ಮುಂದುವರಿದು ಮಾತಾಡಿದ ಅವರು, ಸಿದ್ದರಾಮಯ್ಯ ಒಬ್ಬ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಮುಖ್ಯಮಂತ್ರಿ ಎಂದು ಜನ ಭಾವಿಸಿದ್ದರು, ಅಂಥ ಮುಖ್ಯಮಂತ್ರಿಯಿಂದ ₹ 92 ಕೋಟಿ ವೆಚ್ಚದ ಕಾವೇರಿ ಆರತಿ ಯೋಜನೆ ಯಾಕೆ, ಜನರೆಲ್ಲರನ್ನು ಕರೆದೊಯ್ದು ಪೂಜೆ ಮಾಡಿಸ್ತೀರಾ ಎಂದು ಪ್ರಶ್ನಿಸಿದರು. ರೈತ ಮಹಿಳೆಯ ಪ್ರಶ್ನೆಗಳಿಗೆ ಮುಗುಳ್ನಗುವೊಂದೇ ಸಿದ್ದರಾಮಯ್ಯನವರ ಉತ್ತರವಾಗಿತ್ತು.

ಇದನ್ನೂ ಓದಿ:  ಕಾವೇರಿ ಆರತಿ ಒಮ್ಮೆ ಪ್ರಾರಂಭಿಸಿದ ಮೇಲೆ ಯಾವುದೇ ಕಾರಣಕ್ಕೂ ನಿಲ್ಲಬಾರದು: ರಾಜ್ಯ ಸಚಿವರಿಗೆ ಗಂಗಾರತಿ ಸಭಾ ಸಲಹೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ