ಮಳೆಹಾನಿ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಂದುಹೋದರು, ನಮ್ಮೊಂದಿಗೆ ಮಾತಾಡಲಿಲ್ಲ: ಸಾಯಿ ಲೇಔಟ್ ನಿವಾಸಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: May 21, 2025 | 6:31 PM

ಇವರ ಒಂದು ಊಟ ಬೇಕಿತ್ತಾ ನಮಗೆ? ಊಟವಾದರೂ ಎಂಥದ್ದು? ಅನ್ನ ಚಪಾತಿ ಕೊಟ್ಟಿದ್ದಾರೆ, ಅದಕ್ಕೆ ಸಾಂಬಾರು ಪಲ್ಯ ಇಲ್ಲ, ನಮ್ಮ ಮನೆಯಲ್ಲಿ 5 ಜನ ಇದ್ದೇವೆ ಎಂದು ಬರೆಸಲಾಗಿತ್ತು, ಅದರೆ ಸಿಕ್ಕಿದ್ದು ಮೂರು ಊಟ ಮಾತ್ರ ಎಂದು ಒಬ್ಬ ವ್ಯಕ್ತಿ ಕೋಪದಲ್ಲಿ ಕೇಳುತ್ತಾರೆ. ಯಾವ ಪುರುಷಾರ್ಥ ಸಾಧನೆಗೆ ಇವರು ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಭೇಟಿ ನೀಡಿದರು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು, ಮೇ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ನಗರದ ಸಾಯಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿದರು. ಸಮಸ್ಯೆಗಳಿಗೆ ಏನಾದರೂ ಪರಿಹಾರ ಸೂಚಿಸಿದರೆ ಅಂತ ಬಡಾವಣೆಯ ನಿವಾಸಿಗಳನ್ನು ಕೇಳಿದರೆ ಪರಿಹಾರವಿಲ್ಲ ಎಂಥದ್ದೂ ಇಲ್ಲ, ಸಿಎಂ ಎಸಿ ಬಸ್ಸಲ್ಲಿ ಬಂದರು, ವಾಪಸ್ಸು ಹೋದರು, ನಮ್ಮ ಕಷ್ಟಗಳನ್ನು ವಿಚಾರಿಸುವ ಮಾತು ಹಾಗಿರಲಿ, ಯಾರೊಂದಿಗೂ ಮಾತಾಡದೆ ವಾಪಸ್ಸು ಹೋಗುಬಿಟ್ಟರು, ನಮ್ಮ ಮನೆಗಳಲ್ಲಿ ನೀರು ಹೊಕ್ಕು ಟಿವಿ, ಫ್ರಿಡ್ಜ್, ಮಿಕ್ಸರ್, ವಾಷಿಂಗ್ ಮಷೀನ್-ಎಲ್ಲ ಹಾಳಾಗಿವೆ, ಮನೆಯಲ್ಲಿ ಒಲೆ ಹಚ್ಚಲಾಗುತ್ತಿಲ್ಲ, ಮಕ್ಕಳು ಸಹ ಉಪವಾಸ ಇವೆ ಎಂದು ಒಬ್ಬ ಗೃಹಿಣಿ ಹೇಳುತ್ತಾರೆ.

ಇದನ್ನೂ ಓದಿ:  ಕೆಅರ್ ಪುರದ ಸಾಯಿ ಲೇಔಟ್​ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.