ಸಿದ್ದರಾಮಯ್ಯಗೆ ವಿಪರೀತವಾಗಿ ಕಾಡುತ್ತಿದೆ ಮಂಡಿನೋವು: ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ

Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2025 | 8:31 PM

ಕಳೆದ 27 ದಿನಗಳಿಂದ ತೀವ್ರ ಮಂಡಿನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿನ ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕೆ ವೀಲ್‌ಚೇರ್‌ನಲ್ಲಿ ಆಗಮಿಸಿದ್ದರು. ನಾಡಗೀತೆಯ ಸಮಯದಲ್ಲಿಯೂ ಅವರು ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ಅವರು ಹಲವು ಕಾರ್ಯಕ್ರಮಗಳಿಗೆ ಹಾಜರಾಗದಿರಲು ನಿರ್ಧರಿಸಿದ್ದರು ಆದರೆ ಅಂತರರಾಷ್ಟ್ರೀಯ ಕಾರ್ಯಕ್ರಮದ ಮಹತ್ವದಿಂದಾಗಿ ಭಾಗವಹಿಸಿದ್ದರು.

ಬೆಂಗಳೂರು, ಫೆಬ್ರವರಿ 26: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ವಿಪರೀತವಾಗಿ ಮಂಡಿನೋವು ಕಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವಲ್ ಎಕ್ಸ್ ಪೋ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಶುರುವಾದಾಗಲೂ ಎದ್ದು ನಿಂತ್ತಿಲ್ಲ. ಮಂಡಿನೋವು ಇರುವುದರಿಂದ ಹಾಗೆಯೇ ಕುಳಿತ್ತಿದ್ದರು. ಕಳೆದ 27 ದಿನಗಳಿಂದ ಮಂಡಿನೋವಿನಿಂದ ಸಿಎಂ ಬಳಲುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದರಿಂದ ವಿಧಿ ಇಲ್ಲದೇ ವ್ಹೀಲ್ ಚೇರ್​​ನಲ್ಲೇ ಆಗಮಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.