ಫಿನಾಯಿಲ್ ವಾಸನೆಗೆ ಕಾರಿನಲ್ಲಿ ಮೂರ್ಛೆ ತಪ್ಪಿದ್ದ ನಾಗರಹಾವು: ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 15, 2023 | 2:51 PM

Raichur: ಕೃತಕ ಆಮ್ಲಜನಕದ ಸಾಹಯದಿಂದ ನಾಗರ ಹಾವು ಮರುಜೀವ ಪಡೆದಿರುವಂತಹ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡಿದೆ. ಇನೋವಾ ಕಾರಿನಲ್ಲಿ ಏಕಾ ಏಕಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಹಾವು ಹೊರಬರಲು ಚಾಲಕ ಫಿನಾಯಿಲ್ ಸಿಂಪಡನೆ ಮಾಡಿದ್ದಾರೆ. ಬಳಿಕ ಉರಗ ತಜ್ಞ ಖಾಲೀದ್ ಚಾವೂಸ್ ಸಹಾಯದಿಂದ ಆಸ್ಪತ್ರೆಗೆ ರವಾನೆ ಮಾಡಿ ರಕ್ಷಿಸಲಾಗಿದೆ.

ರಾಯಚೂರು, ನವೆಂಬರ್​​ 15: ಕೃತಕ ಆಮ್ಲಜನಕದ ಸಾಹಯದಿಂದ ನಾಗರ ಹಾವು (Cobra) ಮರುಜೀವ ಪಡೆದಿರುವಂತಹ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡಿದೆ. ಇನೋವಾ ಕಾರಿನಲ್ಲಿ ಏಕಾ ಏಕಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಹಾವು ಹೊರಬರಲು ಚಾಲಕ ಫಿನಾಯಿಲ್ ಸಿಂಪಡನೆ ಮಾಡಿದ್ದಾರೆ. ಹಾಗಾಗಿ ಫಿನಾಯಿಲ್ ವಾಸನೆಗೆ ನಾಗರಹಾವು ಕಾರಿನಲ್ಲಿ ಮೂರ್ಛೆ ತಪ್ಪಿದ್ದೆ. ಬಳಿಕ ಉರಗ ತಜ್ಞ ಖಾಲೀದ್ ಚಾವೂಸ್ ಸಹಾಯದಿಂದ ಆಸ್ಪತ್ರೆಗೆ ರವಾನೆ ಮಾಡಿ, ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಲಾಗಿದೆ. ಬಳಿಕ ಹಾವು ಚೇತರಿಸಿಕೊಂಡ ನಂತರ ಉರಗತಜ್ಞ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.