AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು: ಹಣ ತೆಗೆಯಲು ಬಂದ ಗ್ರಾಹಕರು ಕಂಗಾಲು

ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು: ಹಣ ತೆಗೆಯಲು ಬಂದ ಗ್ರಾಹಕರು ಕಂಗಾಲು

ನಯನಾ ರಾಜೀವ್
|

Updated on: Oct 12, 2026 | 1:44 PM

Share

ಎಟಿಎಂನಿಂದ ಹಣ ತೆಗೆಯಲು ಹೋದ ಗ್ರಾಹಕರಿಗೆ ಅಚ್ಚರಿಯ ಜೊತೆಗೆ ಭಯ ಹುಟ್ಟಿಸುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧೂಪ್ಗುರಿಯಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಎಟಿಎಂ ಒಳಗೆ ನಾಗರಹಾವೊಂದು ಕಾಣಿಸಿಕೊಂಡಿದ್ದು, ಗ್ರಾಹಕರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ. ಭಾನುವಾರ ಮಧ್ಯಾಹ್ನ ಕೆಲವರು ಹಣ ತೆಗೆಯಲು ಎಟಿಎಂಗೆ ತೆರಳಿದ್ದರು. ಈ ವೇಳೆ ಯಂತ್ರದ ಹಿಂಭಾಗದಿಂದ ಬುಸುಗುಟ್ಟುವ ಶಬ್ದ ಕೇಳಿಸಿದೆ. ಏನಿರಬಹುದು ಎಂದು ನೋಡಿದಾಗ, ಸುಮಾರು ನಾಲ್ಕು ಅಡಿ ಉದ್ದದ ಹಾವು ಹೆಡೆ ಎತ್ತಿಕೊಂಡು ಕುಳಿತಿರುವುದು ಕಂಡುಬಂದಿದೆ.

ಧೂಪ್ಗುರಿ, ಅಕ್ಟೋಬರ್ 12: ಎಟಿಎಂನಿಂದ ಹಣ ತೆಗೆಯಲು ಹೋದ ಗ್ರಾಹಕರಿಗೆ ಅಚ್ಚರಿಯ ಜೊತೆಗೆ ಭಯ ಹುಟ್ಟಿಸುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧೂಪ್ಗುರಿಯಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಎಟಿಎಂ ಒಳಗೆ ನಾಗರಹಾವೊಂದು ಕಾಣಿಸಿಕೊಂಡಿದ್ದು, ಗ್ರಾಹಕರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ.

ಭಾನುವಾರ ಮಧ್ಯಾಹ್ನ ಕೆಲವರು ಹಣ ತೆಗೆಯಲು ಎಟಿಎಂಗೆ ತೆರಳಿದ್ದರು. ಈ ವೇಳೆ ಯಂತ್ರದ ಹಿಂಭಾಗದಿಂದ ಬುಸುಗುಟ್ಟುವ ಶಬ್ದ ಕೇಳಿಸಿದೆ. ಏನಿರಬಹುದು ಎಂದು ನೋಡಿದಾಗ, ಸುಮಾರು ನಾಲ್ಕು ಅಡಿ ಉದ್ದದ ಹಾವು ಹೆಡೆ ಎತ್ತಿಕೊಂಡು ಕುಳಿತಿರುವುದು ಕಂಡುಬಂದಿದೆ.

ತಕ್ಷಣವೇ ಗ್ರಾಹಕರು ‘ಡೂರ್ಸ್ ನೇಚರ್ ಅಂಡ್ ಸ್ನೇಕ್ ಲವರ್ ಆರ್ಗನೈಸೇಶನ್’ಗೆ ಮಾಹಿತಿ ನೀಡಿದ್ದಾರೆ. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಅದನ್ನು ಕಾಡಿಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಹಣ ತೆಗೆಯಲು ಬಂದಿದ್ದ ಗ್ರಾಹಕ ಸೈಕತ್ ಭಟ್ಟಾಚಾರ್ಯ, ಹಾವಿನ ಶಬ್ದ ಕೇಳಿ ಹಿಂತಿರುಗಿ ನೋಡಿದಾಗ ಅದು ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ. ಸಕಾಲದಲ್ಲಿ ಹಾವನ್ನು ರಕ್ಷಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ಎಚ್ಚರಿಕೆ: ಎಟಿಎಂ ಅಥವಾ ಕಟ್ಟಡದೊಳಗೆ ಹಾವು ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಓಡಿಸಲು ಪ್ರಯತ್ನಿಸಬೇಡಿ. ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಹಾವು ರಕ್ಷಕರಿಗೆ ಮಾಹಿತಿ ನೀಡಿ. ದುರ್ಗಾಪೂಜಾ ಹಬ್ಬದ ಸಿದ್ಧತೆಗಳ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಸ್ಥಳೀಯ ಎಟಿಎಂ ಕೇಂದ್ರದಲ್ಲಿ ಗ್ರಾಹಕರ ದಟ್ಟಣೆ ಇತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More