Kannada News » Videos » Coldwave in Mysuru: Heavy cold and dew in Mysuru, Mysoreans panic due to bitter cold
Coldwave in Mysuru: ಮೈಸೂರಿನಲ್ಲಿ ಭಾರೀ ಚಳಿ ಇಬ್ಬನಿ, ಮೈಕೊರೆಯುವ ಚಳಿಗೆ ಕಂಗಾಲಾದ ಮೈಸೂರಿಗರು
TV9kannada Web Team | Edited By: Kiran Hanumant Madar
Updated on: Jan 15, 2023 | 12:32 PM
ಸಾಂಸ್ಕೃತಿಕ ನಗರಿ ಹಬ್ಬದ ದಿನವೇ ಮಂಜಿನ ನಗರಿಯಂತಾಗಿದೆ. ಹೆಚ್ಚಾಗಿ ಬೀಳುತ್ತಿರುವ ಮಂಜಿನ ಪರಿಣಾಮ ಮನೆಯಿಂದ ಹೊರಗಡೆ ಬರಲು ಜನರು ಪರದಾಡುತ್ತಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿ ಹಬ್ಬದ ದಿನವೇ ದಟ್ಟನೆಯ ಮಂಜು ಆವರಿಸಿದೆ. ಚುಮು ಚುಮು ಚಳಿಯಲ್ಲಿ ಮನೆಯಿಂದ ಆಚೆ ಬರಲು ಜನರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರಕ್ಕೆ ಮಂಜಿನಿಂದ ಹೊದಿಕೆ ನಿರ್ಮಾಣ ಮಾಡಿದಂತಾಗಿದೆ. ಹೆಚ್ಚಾಗಿ ಬೀಳುತ್ತಿರುವ ಮಂಜಿನ ಪರಿಣಾಮವಾಗಿ ವಾಹನ ಸವಾರರು ಹೆಡ್‌ಲೈಟ್ ಬಳಸಿಯೇ ವಾಹನ ಚಲಾಯಿಸುತ್ತಿದ್ದಾರೆ.