ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಕಮರ್ಷಿಯಲ್ ಸೇವೆ, ಮೊದಲ ವಿಮಾನದಲ್ಲಿ ತವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಬಿಎಸ್ ಯಡಿಯೂರಪ್ಪ
, ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲು ನಿರ್ಣಾಯಕ ಪಾತ್ರ ನಿರ್ವಹಿಸಿದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಂಬಿ ಪಾಟೀಲ್ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ವಿಮಾನದಲ್ಲಿ ಶಿವಮೊಗ್ಗಗೆ ಆಗಮಿಸಲಿದ್ದಾರೆ. ಈ ಭಾಗದ ಜನರ ದಶಕಗಳ ಕನಸು ಇವತ್ತು ಈಡೇರಿದೆ.
ಶಿವಮೊಗ್ಗ: ನಿಮಗೆ ಚೆನ್ನಾಗಿ ನೆನಪಿದೆ. ಸುಮಾರು 6 ತಿಂಗಳು ಹಿಂದೆ; ನಿಖರವಾಗಿ ಹೇಳಬೇಕೆಂದರೆ ಫೆಬ್ರುವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಇಂದಿನಿಂದ ಈ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆ ಆರಂಭವಾಗಲಿದ್ದು ಮೊದಲ ವಿಮಾನ ವಿಮಾನ ಬೆಂಗಳೂರಿನಿಂದ ಇಲ್ಲಿಗೆ ಇನ್ನು ಕೆಲ ಕ್ಷಣಗಳಲ್ಲಿ ಆಗಮಿಸಲಿದೆ. ರಾಜ್ಯದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲು ನಿರ್ಣಾಯಕ ಪಾತ್ರ ನಿರ್ವಹಿಸಿದ ಬಿಎಸ್ ಯಡಿಯೂರಪ್ಪ (BS Yediyurappa), ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಂಬಿ ಪಾಟೀಲ್ (MB Patil) ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ (BY Raghavendra) ವಿಮಾನದಲ್ಲಿ ಶಿವಮೊಗ್ಗಗೆ ಆಗಮಿಸಲಿದ್ದಾರೆ. ಈ ಭಾಗದ ಜನರ ದಶಕಗಳ ಕನಸು ಇವತ್ತು ಈಡೇರಿದೆ. ಟಿವಿ9 ಕನ್ನಡ ವಾಹನಿಯ ಶಿವಮೊಗ್ಗ ವರದಿಗಾರ ಹೇಳುವ ಹಾಗೆ ಮೊದಲ ವಿಮಾನ ನಗರದ ಸೋಗಾನೆ ಬಳಿ ರೂ. 450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಲ್ಲಿ 11.05 ಕ್ಕೆ ಬಂದಿಳಿಯಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ