ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿ ಒಂದೂವರೆ ವರ್ಷವಾಯಿತು, ಬಿಜೆಪಿಯವರು ನಿದ್ರಿಸುತ್ತಿದ್ದರೇ? ಲಕ್ಷ್ಮಿ ಹೆಬ್ಬಾಳ್ಕರ್
ಬಿಜೆಪಿ ನಾಯಕರು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಿಗೆ ಸಂಬಳ ನೀಡುತ್ತಿರುವುದನ್ನು ಪ್ರಶ್ನಿಸುತ್ತಿದ್ದಾರೆ, ಅದರೆ ಪಕ್ಕದ ಮಹಾರಾಷ್ಟ್ರದಲ್ಲಿ ಕೆಲ ಸಚಿವರು ಅರೆಸ್ಸೆಸ್ ಕಾರ್ಯಕರ್ತರನ್ನು ಆಪ್ತ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಂಡು ಸರ್ಕಾರದ ಬೊಕ್ಕಸದಿಂದ ಸಂಬಳ ನೀಡುತ್ತಿದ್ದಾರೆ, ಅದಲ್ಲದೆ ಅಲ್ಲಿ ಲಾಡ್ಲೀ ಬಹೆನಾ ಸ್ಕೀಮ್ ಬಂದ್ ಆಗಿದೆ, ಇದನ್ನೆಲ್ಲ ಯಾಕೆ ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ ಎಂದು ಸಚಿವೆ ಕೇಳಿದರು.
ಬೆಂಗಳೂರು, ಮಾರ್ಚ್ 12 : ಸದನದಲ್ಲಿ ಹಲವಾರು ಚರ್ಚೆಗಳಾಗಬೇಕಿದೆ, ಅನುದಾನ ಹಂಚಿಕೆಯಲ್ಲಿ (grants distribution) ಯಾವುದಾದರೂ ಪ್ರಾಂತ್ಯಕ್ಕೆ ಅನ್ಯಾಯವಾಗಿದೆಯಾ ಅಂತ ಚರ್ಚಿಸಬೇಕಿದೆ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿದೆ, ಇದನ್ನೆಲ್ಲ ಬಿಟ್ಟು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ನೀಡುತ್ತಿರುವ ಸಂಬಳದ ಬಗ್ಗೆ ಬಿಜೆಪಿ ಮುಖಂಡರು ರ‍್ಯಾಲಿ ನಡೆಸಿ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಮಿತಿ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ, ಇದುವರೆಗೆ ಅವರೇನು ನಿದ್ರಿಸುತ್ತಿದ್ದರೇ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ