ಬೆಳಗಾವಿ ಮಹಾರಾಷ್ಟ್ರಗೆ ಸೇರಿದರೆ ತಾನು ಆ ರಾಜ್ಯಕ್ಕೆ ಹೋಗುತ್ತೇನೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು: ವಾಟಾಳ್ ನಾಗರಾಜ್
ಬೆಳಗಾವಿಯಲ್ಲಿ ವಾಸವಾಗಿರುವ ಮರಾಠಿ ಭಾಷಿಕರು ಮತ್ತೊಮ್ಮೆ ಏನಾದರೂ ಕನ್ನಡಿಗರ ತಂಟೆಗೆ ಬರುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ, ಮರಾಠಿಗರೇ ಬೆಳಗಾವಿ ಬಿಟ್ಟು ತೊಲಗಿ ಅಂತ ಆಂದೋಲನ ನಡೆಸಿ ಅವರನ್ನು ಇಲ್ಲಿಂದ ಓಡಿಸುವ ಕೆಲಸ ಶುರು ಮಾಡಬೇಕಾಗುತ್ತದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗರ ಹಿತರಕ್ಷಣೆಗೆ ಮುಂದಾಗಲಿ ಅಂತ ವಿನಂತಿ ಎಂದು ನಾಗರಾಜ್ ಹೇಳಿದರು.
ಬೆಂಗಳೂರು: ಬೆಳಗಾವಿ ಏನಾದರೂ ಮಹಾರಾಷ್ಟ್ರಕ್ಕೆ ಸೇರಿದರೆ ತಾನು ಆ ರಾಜ್ಯಕ್ಕೆ ಸಂತೋಷದಿಂದ ಹೋಗುತ್ತೇನೆ ಅಂತ ಹಿಂದೆ ಹೇಳಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಇವತ್ತು ಮಂತ್ರಿಯಾಗಿರೋದು ಕರ್ನಾಟಕದ ದುರಂತ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಅಲ್ಲಿಯವರೆಗೆ ಕಾಯುವುದು ಬೇಡ ತಾವು ಈಗಲೇ ಹೊರಡಿ ಅಂತ ತಾನು ಆಗಲೇ ಲಕ್ಷ್ಮಿಯವರಿಗೆ ಹೇಳಿದ್ದೆ ಎಂದ ನಾಗರಾಜ್, ಕಾಂಗ್ರೆಸ್ ಸಂಸದರಿಗೆ, ಶಾಸಕರಿಗೆ; ಬಿಜೆಪಿ ಸಂಸದರಿಗೆ ಮತ್ತು ಶಾಸಕರಿಗೆ ಬೆಳಗಾವಿ ಬಗ್ಗೆ ಕಾಳಜಿ ಇಲ್ಲ, ಅವರು ಮಾತ್ರ ಅಲ್ಲ ಅಧಿಕಾರಿಗಳಿಗೂ ಗಡಿ ಜಿಲ್ಲೆಯ ಬಗ್ಗೆ ಯಾವುದೇ ಆಸ್ಥೆ ಇಲ್ಲ ಎಂದರು. ಉಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಕೇವಲ ತಮ್ಮ ರಾಜಕೀಯ ತೆವಲಿಗಾಗಿ ಬೆಳಗಾವಿಯನ್ನು ಬಳಸಿಕೊಳ್ಳುತ್ತಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಲ್ ಅಂಡ್ ಟಿ ಮುಖ್ಯಸ್ಥರ 90 ಗಂಟೆ ಕೆಲಸದ ಹೇಳಿಕೆ; ವಾಟಾಳ್ ನಾಗರಾಜ್ ಪ್ರತಿಭಟನೆ