ಲೋಕಾಯುಕ್ತ ಸಿಎಂರನ್ನು ವಿಚಾರಣೆ ಕರೆದರೂ ಸೂಕ್ತ ತನಿಖೆಯ ಬಗ್ಗೆ ಅನುಮಾನ: ಸ್ನೇಹಮಯಿ ಕೃಷ್ಣ

|

Updated on: Nov 05, 2024 | 11:08 AM

ಎಲ್ಲ ತನಿಖಾ ಏಜೆನ್ಸಿಗಳು ಸರ್ಕಾರಗಳ ಅಧೀನದಲ್ಲಿರುತ್ತವೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶಾನಲಯ ಕೇಂದ್ರ ಸರ್ಕಾರದ ಅಧೀನಲ್ಲಿರುವುದು ನಿಜವಾದರೂ ಸ್ಥಳೀಯ ತನಿಖಾ ಸಂಸ್ಥೆಗಳಿಗಿಂತ ಸಿಬಿಐ ಉತ್ತಮ ಅನ್ನೋದು ತನ್ನ ಅಭಿಪ್ರಾಯ ಎಂದು ಸ್ನೇಹಮಯಿ ಕೃಷ್ಣ ಹೇಳುತ್ತಾರೆ.

ಮೈಸೂರು: ಮುಡಾ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವ ಮೊದಲು ತನಿಖೆ ನಡೆಯುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಈಗ ಲೋಕಾಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದರೂ ಸೂಕ್ತ ತನಿಖೆ ನಡೆಯುವ ಬಗ್ಗೆ ಅನುಮಾನಿಸುತ್ತಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಕಾರಣಕ್ಕೆ ಸಿಎಂರನ್ನು ವಿಚಾರಣೆಗೆ ಕರೆಸಲಾಗುತ್ತಿದೆ, ಆದರೆ ವಿಚಾರಣೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಕೃಷ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಿಲ್ಡರ್ ಮಂಜುನಾಥ್ ವಿರುದ್ಧ ವಿಡಿಯೋ ಸಮೇತ ಇಡಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು