ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟ ಹಿರಿಯ ವಕೀಲೆ
ಮುಡಾ ಸೈಟ್ ಹಂಚಿಕೆಯಲ್ಲಾದ ಹಗರಣ ಕೇಸ್ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲಿಸಿದ್ದ ಖಾಸಗಿ ದೂರಿನ ಅರ್ಜಿಯನ್ನು ಇಂದು ಜನಪ್ರತಿನಿಧಿಗಳ ಕೋರ್ಟ್ ವಿಚಾರಣೆ ನಡೆಸಿದ್ದು, ಈ ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಆದೇಶನ್ನು ಆಗಸ್ಟ್ 13ರಂದು ಕಾಯ್ದಿರಿಸಿದೆ. ಇನ್ನು ಈ ಬಗ್ಗೆ ದೂರುದಾರ ಪರ ವಕೀಲೆ, ಈ ಹಗರಣದ ಬಗ್ಗೆ ಕೆಲ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರು, (ಆಗಸ್ಟ್ 09): ಮುಡಾ ಸೈಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವರು ದಾಖಲಿಸಿದ್ದ ಖಾಸಗಿ ಪ್ರಕರಣದ ಅರ್ಜಿ ವಿಚಾರಣೆಯನ್ನು ಇಂದು ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಿದೆ. ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದರು. ಆದ್ರೆ, ಕೋರ್ಟ್, ಈ ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಏನು ಆದೇಶ ನೀಡುತ್ತೆ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೂರುದಾರ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್, ನಮ್ಮ ದೂರನ್ನು ಸ್ವೀಕಾರ ಮಾಡಿ ಎಂದು ವಾದ ಮಂಡನೆ ಮಾಡಲಾಗಿದ್ದು, ಕೋರ್ಟ್ ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ. ಒಂದು ಕಡೆ ಬಿಟ್ಟು ಮತ್ತೊಂದು ಕಡೆ ಸೈಟ್ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರ ಅವರಿಗೆ ಎರಡು ಸೈಟ್ ಬರೋದು. ಹಕ್ಕು ಇದ್ರೆ ಮಾತ್ರ ಗಿಫ್ಟ್ ಡಿಡ್ ಮಾಡಕ್ಕೆ ಬರುತ್ತೆ. ಹಕ್ಕು ಇಲ್ಲ ಅದ್ರೆ ಟೈಟಲ್ ಬರೋದಿಲ್ಲ. ಇದನ್ನ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದೆವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್: ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ
ಸಿದ್ದರಾಮಯ್ಯ ಪತ್ನಿ ಗೃಹಿಣಿಯಾಗಿದ್ದಾರೆ. ಅವರು ಕೆಲಸ ಮಾಡವುದಿಲ್ಲ ಅವರು ಸಂಪಾದನೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರ ಸಂಪೂರ್ಣ ಅಧಿಕಾರ ದುರುಪಯೋಗ ಮಾಡಿದ್ದಾರೆ. ಮೊದಲು ಯಾರು ಇದರಿಂದ ಲಾಭ ಪಡೆದಿದ್ದಾರೆ ಅವರನ್ನ ನಾವು ಆರೋಪಿಗಳನ್ನಾಗಿ ಮಾಡಿದ್ದೇವೆ. ಮುಡಾ ಕಮಿಷನರ್ ರನ್ನ ಸಹ ನಾವು ದೂರಿನಲ್ಲಿ ತೋರಿಸಿದ್ದೇವೆ. ಸ್ವತಂತ್ರ ತನಿಖಾ ಏಜೆನ್ಸಿಯಿಂದ ತನಿಖೆಗೆ ನಾವು ಕೇಳಿದ್ದೇವೆ. ಈ ಹಗರಣದಲ್ಲಿ ಅಧಿಕಾರಿಗಳನ್ನು ಸಹ ಮುಂದೆ ದೂರಿನಲ್ಲಿ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪ್ರದೀಪ್ ಚಿಕ್ಕಾಟಿ