AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಅಮ್ಮನನ್ನ ಬಲಿ ತಗೊಳ್ತು; ಮಗನ ಅಳಲು

ಶಿವಮೊಗ್ಗ: ಮನೆಯಲ್ಲಿ ಸಾಕಿದ್ದ ಬೆಕ್ಕು ಅಮ್ಮನನ್ನ ಬಲಿ ತಗೊಳ್ತು; ಮಗನ ಅಳಲು

ಕಿರಣ್ ಹನುಮಂತ್​ ಮಾದಾರ್
|

Updated on: Aug 09, 2024 | 9:45 PM

Share

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ(Shikaripur) ತಾಲೂಕಿನ ತರಲಘಟ್ಟದಲ್ಲಿ ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಇಂದು(ಶುಕ್ರವಾರ) ನಡೆದಿದೆ. ಗಂಗೀಬಾಯಿ(50) ಮೃತ ಮಹಿಳೆ. ಇನ್ನು ಈ ಕುರಿತು ಮಾತನಾಡಿದ ಮೃತರ ಮಗ ಕಿರಣ್​, ‘ಮನೆಯಲ್ಲಿ ಬೆಕ್ಕು(Cat) ಸಾಕಿದ್ದೇವು. ಅದು ಎರಡು ತಿಂಗಳ ಹಿಂದೆ ನಮ್ಮ ಅಮ್ಮನಿಗೆ ಕಚ್ಚಿತ್ತು. ಇಂದು ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ ಎಂದು ಮೃತರ ಮಗ ಅಳಲು ತೋಡಿಕೊಂಡರು.

ಶಿವಮೊಗ್ಗ, ಆ.09: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ(Shikaripur) ತಾಲೂಕಿನ ತರಲಘಟ್ಟದಲ್ಲಿ ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಇಂದು(ಶುಕ್ರವಾರ) ನಡೆದಿದೆ. ಗಂಗೀಬಾಯಿ(50) ಮೃತ ಮಹಿಳೆ. ಇನ್ನು ಈ ಕುರಿತು ಮಾತನಾಡಿದ ಮೃತರ ಮಗ ಕಿರಣ್​, ‘ಮನೆಯಲ್ಲಿ ಬೆಕ್ಕು(Cat) ಸಾಕಿದ್ದೇವು. ಅದು ಎರಡು ತಿಂಗಳ ಹಿಂದೆ ನಮ್ಮ ಅಮ್ಮನಿಗೆ ಕಚ್ಚಿತ್ತು. ಇದಾದ ಬಳಿಕ ಮೂರ್ನಾಲ್ಕು ದಿವಸ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದಕ್ಕೆ , ಬೆಕ್ಕು ಕಚ್ಚಿದ ಜಾಗ ಸೆಪ್ಟಿಕ್​ ಆಗಿತ್ತು. ಇದಾದ ನಂತರ ನಮ್ಮ ಅಮ್ಮ ಕಾಲು ಸೆಳೆಯುತ್ತದೆ ಎಂದು ಹೇಳಿದ್ದರು. ಹೀಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದೇವು. ಅವರು ಐದು ಇಂಜೆಕ್ಷನ್​ ಹಾಕಲು ಹೇಳಿದ್ದರು. ಅದರಂತೆ ಒಂದು ಇಂಜೆಕ್ಷನ್​ ಹಾಕಲಾಗಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆದ ಹಿನ್ನಲೆ ಉಳಿದ ನಾಲ್ಕು ಇಂಜೆಕ್ಷನ್​ ಹಾಕಿಸಲಿಲ್ಲ. ಆದರೆ, ನಿನ್ನೆ(ಆ.08) ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೂ. ಆದರೆ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಅಳಲು ತೋಡಿಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Read More