Mangaluru News; ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸುವುದು ಸರಿ ಆದರೆ ಯಾರನ್ನೂ ಫೇಲ್ ಮಾಡಬಾರದು: ಮಧು ಬಂಗಾರಪ್ಪ, ಶಿಕ್ಷಣ ಸಚಿವ

|

Updated on: Jul 22, 2023 | 6:01 PM

ಮಕ್ಕಳ ಮೇಲಿನ ಪರೀಕ್ಷೆ ಮತ್ತು ಫಲಿತಾಂಶದ ಒತ್ತಡವನ್ನು ಕಡಿಮೆ ಮಾಡಲೆಂದೇ ಭಾಷೆಗಳಿಗೂ ಸೇರಿದಂತೆ ಎಲ್ಲ ವಿಷಯಗಳಿಗೆ 20 ಪ್ರ್ಯಾಕ್ಟಿಕಲ್ ಅಂಕಗಳನ್ನು ನಿಗದಿಪಡಿಸಲಾಗುವುದು ಎಂದು ಸಚಿವ ಹೇಳಿದರು.

ಮಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಶಾಲೆಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಬೇಕೇ ಹೊರತು ಫೇಲ್ ಮಾಡಬಾರದರು ಎಂದು ಹೇಳಿದರು. ಮಕ್ಕಳ ಕಲಿಕಾ ಸಾಮರ್ಥ್ಯ  (learning ability) ವಿಶ್ಲೇಷಿಸಲು ಪರೀಕ್ಷೆಗಳನ್ನು ನಡೆಸುವುದು ಸರಿಯಾದರೂ ಮಕ್ಕಳನ್ನು ಅನುತ್ತೀರ್ಣಗೊಳಿಸಿ ಅದೇ ತರಗತಿಯಲ್ಲಿ ಉಳಿಸಿಕೊಳ್ಳಬಾರದು ಎಂದು ಹೇಳಿದ ಅವರು ಮಕ್ಕಳು ಫೇಲಾಗಬಾರದು ಅನ್ನುವ ಕಾರಣಕ್ಕೆ ಪೋಷಕರು ವಿಪರೀತ ಒತ್ತಡ (pressure) ಹೇರುತ್ತಾರೆ ಅದು ಸರಿಯಲ್ಲ, ಮಕ್ಕಳು ತಮ್ಮ ತಮ್ಮ ಸಾಮರ್ಥ್ಯಗನುಗುಣವಾಗಿ ಓದುತ್ತಾರೆ ಮತ್ತು ವಿಷಯಗಳನ್ನು ಗ್ರಹಿಸಿಕೊಳ್ಳುತ್ತಾರೆ ಎಂದರು. ಮಕ್ಕಳ ಮೇಲಿನ ಪರೀಕ್ಷೆ ಮತ್ತು ಫಲಿತಾಂಶದ ಒತ್ತಡವನ್ನು ಕಡಿಮೆ ಮಾಡಲೆಂದೇ ಭಾಷೆಗಳಿಗೂ ಸೇರಿದಂತೆ ಎಲ್ಲ ವಿಷಯಗಳಿಗೆ 20 ಪ್ರ್ಯಾಕ್ಟಿಕಲ್ ಅಂಕಗಳನ್ನು ನಿಗದಿಪಡಿಸಲಾಗುವುದು. ಮೊದಲು ಇದು ಕೇವಲ ರಸಾಯ ಶಾಸ್ತ್ರ, ಭೌತ ಶಾಸ್ತ್ರ, ಜೀವ ಶಾಸ್ತ್ರ ಮೊದಲಾದ ಐಚ್ಛಿಕ ವಿಷಯಗಳಿಗೆ ಮಾತ್ರ ಮೀಸಲಾಗಿರುತಿತ್ತು, ಇನ್ನು ಮುಂದೆ ಲ್ಯಾಂಗ್ವೇಜ್ ಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಹೇಳಿದರು. ಅದರರ್ಥ ಮಕ್ಕಳು ಕೇವಲ 80 ಅಂಕಗಳಿಗೆ ಮಾತ್ರ ಪರೀಕ್ಷೆ ಬರೆಯಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ