Shivamogga; ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತಿನ ಧಾಟಿ ದುರಹಂಕಾರದ ಪರಮಾವಧಿ: ಬಿವೈ ವಿಜಯೇಂದ್ರ, ಶಾಸಕ
ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರದ ಬಗ್ಗೆ ಪ್ರಶ್ನೆ ಕೇಳಿದಾಗ, ಒಬ್ಬ ಶಾಸಕನಾಗಿ ಕೇವಲ ತಮ್ಮ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆಯಷ್ಟೇ ಮಾತಾಡುತ್ತೇನೆ ಅಂತ ವಿಜಯೇಂದ್ರ ಜಾಣ ಉತ್ತರ ನೀಡಿದರು.
ಶಿವಮೊಗ್ಗ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ (BY Vijayendra) ಆರ್ ಎಸ್ ಎಸ್ ಗೆ (RSS) ನೀಡಿದ ಜಮೀನು ಸರ್ಕಾರ ವಾಪಸ್ಸು ಪಡೆಯಲು ನಿರ್ಧರಿಸಿದ್ದನ್ನು ಕಟುವಾಗಿ ಟೀಕಿಸಿದರು. ಕಳೆದ 20-30 ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಸರ್ಕಾರಗಳು ವಿವಿಧ ಸಂಘ ಸಂಸ್ಥೆಗಳಿಗೆ ನೀಡಿರಬಹುದಾದ ಜಮೀನಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ, ಆರ್ ಎಸ್ ಎಸ್ ನಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಉಪಯೋಗವಾಗುತ್ತಿರುವ ಜಮೀನು ಮಾತ್ರ ಯಾಕೆ ವಾಪಸ್ಸು ಪಡೆಯುತ್ತಾರೆ ಎಂದು ಶಾಸಕ ಪ್ರಶ್ನಿಸಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಕೆಬಿ ಹೆಡ್ಗೆವಾರ್ ಪಾಠವನ್ನು ಪಠ್ಯಕ್ರಮದಿಂದ ತೆಗೆಯಲಾಗಿದೆ ಅಂತ ಹೇಳುವ ಬದಲು ಕಿತ್ತು ಹಾಕಿದ್ದೇವೆ ಅಂತ ಹೇಳೋದು ದುರಹಂಕಾರದ ಪರಮಾವಧಿ ಎಂದು ವಿಜಯೇಂದ್ರ ಹೇಳಿದರು. ವಿಧಾನ ಸಭೆಯ ಅಧಿವೇಶನ ಕೊನೆಗೊಳ್ಳುವ ಹಂತದಲ್ಲಿದ್ದರೂ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರದ ಬಗ್ಗೆ ಪ್ರಶ್ನೆ ಕೇಳಿದಾಗ, ಒಬ್ಬ ಶಾಸಕನಾಗಿ ಕೇವಲ ತಮ್ಮ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆಯಷ್ಟೇ ಮಾತಾಡುತ್ತೇನೆ ಅಂತ ವಿಜಯೇಂದ್ರ ಜಾಣ ಉತ್ತರ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ